ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
ನಿಟ್ಟೆ: "ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಮ್ಮ ಜೀವನಶೈಲಿಯಲ್ಲೂ ವಿವಿಧ ಬಗೆಯ ಬದಲಾವಣೆಗಳನ್ನು ಕಾಣಬಹುದಾಗಿದೆ. ವಿದ್ಯಾರ್ಥಿದೆಸೆಯಲ್ಲಿ ಯಾವುದು ಸರಿ, ತಪ್ಪು ಎಂಬುದನ್ನು ನಿರ್ಧರಿಸಿ ಉತ್ತಮ ದಾರಿಯನ್ನು ಆರಿಸಿಕೊಂಡು ಜೀವನದಲ್ಲಿ ಮುನ್ನಡೆಯುವುದು ಅತಿಮುಖ್ಯವಾಗುತ್ತದೆ" ಎಂದು ಮೂಡಬಿದ್ರೆಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಇಂಜಿನಿಯರಿಂಗ್‍ನ ಪ್ರಾಂಶುಪಾಲ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಕೆಡೆಮಿಕ್ ಸೆನೇಟ್‍ನ ಸದಸ್ಯ ಡಾ.ಜಿ.ಎಲ್. ಈಶ್ವರ ಪ್ರಸಾದ್ ಅಭಿಪ್ರಾಯಪಟ್ಟರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಪ್ಟೆಂಬರ್ 24 ರಂದು ನಡೆದ 2020-2021 ನೇ ಶೈಕ್ಷಣಿಕ ಸಾಲಿನ ಪದವಿಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. "ಇಂದು ಭಾರತವು ಇಂಟರ್‍ನೆಟ್ ಕ್ಷೇತ್ರದಲ್ಲಿ 5ಜಿ ಅಂತಹ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿದೆ. ಇಂತಹ ತಂತ್ರಜ್ಞಾನ ಕ್ರಾಂತಿಯು ದೇಶದ ಬೆಳವಣಿಗೆಗೆ ಪೂರಕವೇ ಸರಿ. ಪ್ರತಿದಿನವೂ ನಾವು ವಿವಿಧ ಕ್ಷೇತ್ರದಲ್ಲಿ ಕಲಿಕೆಯನ್ನು ಮುಂದುವರೆಸಲು ಅವಕಾಶಗಳು ವಿಫುಲವಾಗಿವೆ. ನಮ್ಮ ದೃಢ ನಿರ್ಧಾರವೇ ನಮ್ಮ ಸಾಧನೆಯ ಮಟ್ಟಿಲಾಗಬೇಕು. ಕಲಿಕೆಯನ್ನು ನಿರಂತರವಾಗಿ ಮುಂದುವರೆಸಲು ವಯಸ್ಸು ಯಾವುದೇ ರೀತಿಯಲ್ಲೂ ಅಡ್ಡಿಯಾಗದು" ಎಂದು ಅವರು ಹೇಳಿ ಪದವಿ ಗಳಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಪತಿ ಶ್ರೀ ಎನ್. ವಿನಯ ಹೆಗ್ಡೆ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ "ನಮ್ಮ ಜೀವನದಲ್ಲಿ ಸಾಧನೆಗೈಯ್ಯಲು ನಮಗೆ ಉತ್ತಮ ಉತ್ತೇಜನ ಅಗತ್ಯವಿದೆ. ಪ್ರತಿಯೋರ್ವ ಪ್ರಾಧ್ಯಾಪಕನೂ ತಮ್ಮ ಕ್ಷೇತ್ರದಲ್ಲಿನ ಬೆಳವಣಿಗೆಯನ್ನು ಅರಿತುಕೊಂಡು ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ದಾರಿಯಾಗಬೇಕು. ಯಶಸ್ಸಿನ ಹಿಂದೆ ಜ್ಞಾನ, ಪ್ರಾಮಾಣಿಕ ಪ್ರಯತ್ನ ಹಾಗೂ ವಿವಿಧ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮನೋಭಾವ ಅಡಕವಾಗಿರುತ್ತದೆ" ಎಂದರು.
ಪದವಿಪ್ರದಾನ ಸಮಾರಂಭದ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿವಿಧ ಕೋರ್ಸ್‍ಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿಪದಕಗಳನ್ನು ನೀಡಿ ಸನ್ಮಾನಿಸಲಾಯಿತು. ಬಿ.ಇ, ಎಂ.ಟೆಕ್ ಹಾಗೂ ಎಂ.ಸಿ.ಎ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಡಿಗ್ರಿ ಪ್ರದಾನ ಮಾಡಲಾಯಿತು.
ಬಿ.ಇ ವಿಭಾಗದಲ್ಲಿ ಬಯೋಟೆಕ್ನಾಲಜಿ ವಿಭಾಗದ ಶಿವಾನಿ, ಸಿವಿಲ್ ವಿಭಾಗದ ಸಿದ್ಧಿವಿನಾಯಕ ದತ್ತಾತ್ರೇಯ ಹೆಗ್ಡೆ, ಕಂಪ್ಯೂಟರ್‍ಸೈನ್ಸ್‍ನ ಮೈತ್ರಿ ಸುರೇಶ್, ಇಲೆಕ್ಟ್ರಾನಿಕ್ಸ್ ವಿಭಾಗದ ಸಂಜನಾ, ಇಲೆಕ್ಟ್ರಿಕಲ್ ವಿಭಾಗದ ಶ್ರೇಯಸ್ ಪಿ.ಪಿ, ಇನ್ಫೋಮೇಶನ್‍ಸೈನ್ಸ್‍ನ ಅರ್ಚನಾ ಎಸ್.ಎಚ್, ಮೆಕ್ಯಾನಿಕಲ್ ವಿಭಾಗದ ಕೆನನ್ ಡಿಸಿಲ್ವಾ, ಮತ್ತು ಎಂ.ಟೆಕ್ ವಿಭಾಗದಲ್ಲಿ ಶ್ರೀಲಕ್ಷ್ಮೀ ಎಂ, ಎಚ್.ಎಂ. ಮೇಘನಾ, ಶಾರದಾ ಜಿ, ಪ್ರಗತಿ ಯು ರಾವ್, ಲುಬ್ನಾ ಮೊಹಮ್ಮದ್, ಅಖಿಲ್ ಮೊಹಮ್ಮದ್, ಹರಿಪ್ರಸಾದ್ ಹಾಗೂ ಎಂ.ಸಿ.ಎ ವಿಭಾಗದ ಬಬಿತಾ ಶೆಟ್ಟಿ ಕೆ ಚಿನ್ನದ ಪದಕ ಪಡೆದರು. ಬಿ.ಇ ವಿಭಾಗದಲ್ಲಿ ಬಯೋಟೆಕ್ನಾಲಜಿ ವಿಭಾಗದ ಶ್ರೇಯಾ ಹೆಗ್ಡೆ, ಸಿವಿಲ್ ವಿಭಾಗದ ಸುಜಿತ್ ಶೆಟ್ಟಿ, ಕಂಪ್ಯೂಟರ್‍ಸೈನ್ಸ್‍ನ ಶಿವಾನಿ ಶೆಣೈ ಬಿ, ಇಲೆಕ್ಟ್ರಾನಿಕ್ಸ್ ವಿಭಾಗದ ನಿಶಾ ವಿರಾ ಡಿಕುನ್ನಾ, ಇಲೆಕ್ಟ್ರಿಕಲ್ ವಿಭಾಗದ ಪೃಥ್ವಿ ಜೆ ಪಡ್ಪು, ಇನ್ಫೋಮೇಶನ್‍ಸೈನ್ಸ್‍ನ ಮೇಧಿನಿ ಐತಾಳ್, ಮೆಕ್ಯಾನಿಕಲ್ ವಿಭಾಗದ ಅಜಯ್ ಕೆ ಶೆಟ್ಟಿ, ಮತ್ತು ಎಂ.ಟೆಕ್ ವಿಭಾಗದಲ್ಲಿ ಪ್ರಜ್ವಲ್ ಕೆ.ಎಸ್, ಮೊಹಮ್ಮದ್ ಹಾಶಿಮ್ ಎಂ.ಎಚ್, ದೀಕ್ಷಾ ವಿ ನಾಯ್ಕ್, ವೈಷ್ಣವಿ ಎಸ್ ಶೆಟ್ಟಿ, ವಂದನಾ ಆರ್.ಪಿ, ಅಶ್ವಿನಿ ಯು, ನಿಖಿಲ್ ಕನೋಜಿ ಹಾಗೂ ಎಂ.ಸಿ.ಎ ವಿಭಾಗದ ವಿಘ್ನೇಶ್ ಪೈ ಬೆಳ್ಳಿ ಪದಕಗಳಿಸಿದರು.
ವೇದಿಕೆಯಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ವಾರ್ಷಿಕ ವರದಿಯನ್ನು ವಾಚಿಸುವುದರೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಉಪಪ್ರಾಂಶುಪಾಲ ಹಾಗೂ ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ರಾವ್ ಬಿ.ಆರ್ ಸಮಾರಂಭದ ಮೆರವಣಿಗೆಯನ್ನು ಮುನ್ನಡೆಸಿದರು. ಉಪಪ್ರಾಂಶುಪಾಲ ಡಾ.ಐ ರಮೇಶ್ ಮಿತ್ತಂತಾಯ ಚಿನ್ನ ಹಾಗೂ ಬೆಳ್ಳಿಯ ಪದಕಗಳಿಸಿದ ವಿದ್ಯಾರ್ಥಿಗಳ ಹೆಸರುಗಳನ್ನು ವಾಚಿಸಿದರು. ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಹಾಗೂ ಮೆಕ್ಯಾನಿಕಲ್ ವಿಭಾಗದ ಪ್ರೊಫೆಸರ್ ಡಾ.ಶ್ರೀನಿವಾಸ್ ಪೈ ವಂದಿಸಿದರು. ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಸಂಯೋಜಿಸಿದರು. ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ.ಉಜ್ವಲ ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment