ಮಂಗಳೂರು: ಬೆಂಗಳೂರಿನ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ (ರಿ.) ನೀಡುವ ರಾಷ್ಟ್ರ ಮಟ್ಟದ ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಮಂಗಳೂರಿನ ಸಹಾಯಕ ಕಾವ್ಯ ನಿರ್ವಾಹಕ ಇಂಜಿನಿಯರ್ ಹಾಗೂ ಸಮಾಜ ಸೇವಕ ಡಾ.ಕೆ.ಟಿ. ಚಂದ್ರಶೇಖರಯ್ಯರವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಸಂಸ್ಥೆಯ 29ನೇ ಸಮಾರಂಭದ ವೇಳೆ ಸಪ್ಟೆಂಬರ್ 25ರಂದು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಈಗಾಗಲೇ ಅವರಿಗೆ ಬೆಸ್ಟ್ ಎಂಜಿನಿಯರ್ ಅವಾರ್ಡ್ ಹಾಗೂ ಗೌರವ ಡಾಕ್ಟರೇಟ್ ಪ್ರಶಸ್ತಿ ಕೂಡಾ ವೃತ್ತಿಸೇವೆ ಹಾಗೂ ಸಮಾಜ ಸೇವೆಗಾಗಿ ಪ್ರಾಪ್ತವಾಗಿದೆ. ಅವರು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು ಪತ್ನಿ ಶ್ರೀಮತಿ ಪ್ರಭಾ ಚಂದ್ರಶೇಖರ್, ಮಗಳು ಹಿಮಾ ಹಾಗೂ ಮಗ ಕ್ಷೇಮ್ ಅವರೊಂದಿಗೆ ವಾಸವಾಗಿರುತ್ತಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment