ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೈಕಲ್ ರೈಡ್ ವೇಳೆ ಕುಸಿದು ಬಿದ್ದು ಸಾವು

ಸೈಕಲ್ ರೈಡ್ ವೇಳೆ ಕುಸಿದು ಬಿದ್ದು ಸಾವು

 



ಹುಬ್ಬಳ್ಳಿ: ನಗರದ ಹವ್ಯಾಸಿ‌ ಸೈಕ್ಲಿಸ್ಟ್ ಓರ್ವರು ಸ್ನೇಹಿತರೊಂದಿಗೆ ಸೈಕಲ್ ರೈಡ್ ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬಸನಗೌಡ ಶಿವಳ್ಳಿ (35)ವರ್ಷ ಮೃತಪಟ್ಟ ಹವ್ಯಾಸಿ‌ ಸೈಕ್ಲಿಸ್ಟ್. 


ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಶನಿವಾರ ಒಟ್ಟು 200 ಕಿ.ಮೀ. ಸೈಕಲ್ ಓಡಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಟ್ಟು 35 ಸೈಕ್ಲಿಸ್ಟ್ ಗಳು ಭಾಗವಹಿಸಿದ್ದರು.


 ಶಿಗ್ಗಾವಿಯಿಂದ ಮೂರು ಕಿ.ಮೀ. ಮುಂದಕ್ಕೆ ಹೋದಾಗ ಅವರು ಏಕಾಏಕಿ ಕುಸಿದು ಬಿದ್ದು‌ ಮೃತಪಟ್ಟಿದ್ದಾರೆ.


ತಕ್ಷಣವೇ ತಂಡದಲ್ಲಿದ್ದ ವೈದ್ಯರು ಪರೀಕ್ಷೆ ಮಾಡಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ಎಂದರು.


 ಮೃತ ಬಸನಗೌಡ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

0 Comments

Post a Comment

Post a Comment (0)

Previous Post Next Post