All are equal before law but some are more equal.. ಅಂದರೆ ಕಾನೂನಿನ ಎದುರು ಎಲ್ಲರೂ ಸಮಾನರು ಆದರೆ ಕೆಲವರು ಹೆಚ್ಚಿಗೆ ಸಮಾನರು. ಇದು ನಮ್ಮ ಸಂವಿಧಾನದ ವಿಧಿ 14ಕ್ಕೆ ಕೊಡುತ್ತಿರುವ ವಿಶೇಷ ಗೌರವ!!. ಸ್ವಾಮಿ! ಪ್ರಶ್ನೆ ಮಾಡಬೇಡಿ.
ಈ ಕೊರೊನಾ ಸಂದರ್ಭದಲ್ಲಿ ಈ (ಅ)ಸಮಾನತೆಯ ವೆೈಪರೀತ್ಯ ವಿಶೇಷವಾಗಿ ಗೇೂಚರಿಸುತ್ತಿದೆ. ಸಾಕ್ಷಿ ಬೇಕೇ? ಇಲ್ಲಿದೆ ನೇೂಡಿ.
1. ಸರಕಾರದ ಕಾರ್ಯಕ್ರಮಗಳಿಗೆ ಸಭೆ ಸಮಾರಂಭಗಳಿಗೆ ಜನ ಸೇರಿಸುವುದಕ್ಕಾಗಲಿ ಮಾಸ್ಕ್ ಧರಿಸುವುಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಜನಸಾಮಾನ್ಯರ ಅಂಗಡಿ ಮುಂಗಟ್ಟುಗಳನ್ನು ಪ್ರತಿ ನಿತ್ಯ ಪ್ರವೇಶಿಸುವಾಗ ಮಾಸ್ಕ್ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಲೇಬೇಕು. ಮಾತ್ರವಲ್ಲ, ವಾರಾಂತ್ಯ ಕರ್ಫ್ಯೂವಿನಲ್ಲಿಅಂಗಡಿ ಮುಂಗಟ್ಟು ತೆರೆಯುವಂತಿಲ್ಲ. ತೆರೆದರೆ ಕಾನೂನಿನ ರೀತ್ಯಾ ಶಿಕ್ಷೆ ಕಾದಿರಿಸಲಾಗಿದೆ.
2. ಜನ ಸಾಮಾನ್ಯರ ಮದುವೆ ಶುಭ ಸಮಾಂಭಗಳಿಗೆ ಸಭಾ ಭವನದ ಅರ್ಧಾಂಶ ಪ್ರವೇಶಿಸಲು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಅಗತ್ಯ. ನೀವು ಶಾಸಕರು ಸಂಸದರು ಮಂತ್ರಿಗಳ ಮಕ್ಕಳ ಮದುವೆ ಸಮಾರಂಭ ಆಗಿದ್ದಲ್ಲಿ ನಿಮಗೆ ಯಾವುದೇ ಕೊರೊನ ನಿಯಮ ಅನ್ವಯಿಸುವುದಿಲ್ಲ.
3. ರಾಜಕೀಯ ಪಕ್ಷಗಳ ಚುನಾವಣಾ ಸಭೆ ಸಮಾರಂಭ ಹಾಗೂ ಅದರ ಕಾರ್ಯಕರ್ತರು ಮತ ಯಾಚಿಸಲು ನಿಮ್ಮ ಮನೆ ಬಾಗಿಲಿಗೆ ಬರಬಹುದು; ಅದೇ ನೀವು ಹೊರಗೆ ಸುಮ್ಮನೆ ಬೇರೆಯವರ ಮನೆಬಾಗಿಲಿಗೆ ಹೇೂಗುವ ಹಾಗಿಲ್ಲ. ಇದು ಕೊರೊನ ಅಧಿ ನಿಯಮ. ಸ್ವಾಮಿ ಅಥ೯ಮಾಡಿಕೊಳ್ಳಿ.
4. ರಾಜಕೀಯ ಪಕ್ಷದವರು ಮತ್ತು ಆಡಳಿತರೂಢ ಪಕ್ಷ ನಿಯಮ ಪಾಲಿಸದೇ ಇದ್ದರೆ ಜನರು ಪ್ರಶ್ನೆ ಮಾಡುವ ಹಾಗಿಲ್ಲ. ಯಾಕೆಂದರೆ ನಿಮ್ಮನ್ನು ಆಳಲು ಆ ದೇವರೆ ನಮ್ಮನ್ನು ಧರೆಗೆ ಇಳಿಸಿದ್ದು. ಹಾಗಾಗಿ ನೀವು ಪ್ರಶ್ನೆ ಮಾಡುವುದೆಂದರೆ ಆ ದೇವರನ್ನೆ ಪ್ರಶ್ನೆ ಮಾಡಿದ ಹಾಗೆ. ಹಾಗಾಗಿ we are not subject to your contract. Thomas Hobbes social contract theory. (England)
ಯಾಕೆಂದರೆ ಇದು ಪ್ರಜಾಪ್ರಭುತ್ವ ಕ್ಷಮಿಸಿ ಮಜಾಪ್ರಭುತ್ವ. ಜನರು ಸೇವಕರು ನೀವು ಪ್ರಭುಗಳು. ಇದುವೆ ಕೊರೊನಾದ ಸಮಾನತೆಯ ಪ್ರಜಾಪ್ರಭುತ್ವ!!?
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment