ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 NISER ಮೂಲ ವಿಜ್ಞಾನ ಪರೀಕ್ಷೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಚಂದನ ಶಂಕರ್‌ಗೆ 86.914 ಪರ್ಸೆಂಟೈಲ್ ಅಂಕ

NISER ಮೂಲ ವಿಜ್ಞಾನ ಪರೀಕ್ಷೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಚಂದನ ಶಂಕರ್‌ಗೆ 86.914 ಪರ್ಸೆಂಟೈಲ್ ಅಂಕ



ಪುತ್ತೂರು: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಮತ್ತು ರಿಸರ್ಚ್ ಸೆಂಟರ್ (NISER) ಮೂಲ ವಿಜ್ಞಾನ ವಿಷಯಕ್ಕಾಗಿ ಆಗಸ್ಟ್ 14ರಂದು ನಡೆಸಿದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚಂದನ ಶಂಕರ್ 86.914 ಪರ್ಸೆಂಟೈಲ್ ಅಂಕ ಗಳಿಸಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡಿದ್ದಾರೆ.


ಈಕೆ ನೆಹರೂನಗರದ ಶಂಕರ್ ಎಸ್ ಮತ್ತು ಗೀತಾ ಎ ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯ  ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.


ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ಭಾರತದ ಒಡಿಶಾದ ಜಟಾನಿಯಲ್ಲಿರುವ ಸ್ವಾಯತ್ತ ಪ್ರಧಾನ ಸಾರ್ವಜನಿಕ ಸಂಶೋಧನಾ ಸಂಸ್ಥೆಯಾಗಿದ್ದು, ಹೋಮಿ ಭಾಭಾ ರಾಷ್ಟ್ರೀಯ ಸಂಸ್ಥೆಯ ಒಂದು ಘಟಕವಾಗಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post