ಬೆಂಗಳೂರು ; ಜ್ಯೂನಿಯರ್ ಚಿರು ಎಂದೇ ಹೆಸರಾದ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರ 10 ತಿಂಗಳ ಪ್ರಾಯದ ಪುತ್ರನಿಗೆ 'ರಾಯನ್ ರಾಜ್ ಸರ್ಜಾ' ಎಂದು ನಾಮಕರಣ ಮಾಡಲಾಗಿದೆ.
ನಗರದ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ನಟ ಧ್ರುವ ಸರ್ಜಾ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಈ ನಾಮಕರಣದ ವಿಡಿಯೊವೊಂದನ್ನು ಮೇಘನಾ ರಾಜ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, 'ರಾಯನ್ ರಾಜ್ ಸರ್ಜಾ- ನಮ್ಮ ಯುವರಾಜ' ಎಂದು ಬರೆದುಕೊಂಡಿದ್ದಾರೆ.
Post a Comment