ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕಾಸ್ಬಾ ಗ್ರಾಮದ 11 ವರ್ಷದ ಬಾಲಕನೊಬ್ಬ ಕಲ್ಲಿನ ಕ್ವಾರಿಗೆ ಜಾರಿ ಬಿದ್ದು, ಮೃತಪಟ್ಟಿರುವ ಘಟನೆಯೊಂದು ಶನಿವಾರ ನಡೆದಿದೆ.
ಮೃತ ಬಾಲಕನನ್ನು ಮೊಹಮ್ಮದ್ ಮೊಹದ್ ಎಂದು ಗುರುತಿಸಲಾಗಿದೆ.
ಮೊಹದ್ ತನ್ನ ಸ್ನೇಹಿತರ ಜೊತೆಯಲ್ಲಿ ಕ್ವಾರಿ ಬಳಿಗೆ ಆಟವಾಡಲು ಹೋಗಿದ್ದನು.
ಈ ವೇಳೆ ಕಾಲು ಜಾರಿ ಕ್ವಾರಿಗೆ ಬಿದ್ದಿದ್ದಾನೆ. ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಬಾಲಕನನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಬಾಲಕ ದಾರಿಯಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಬಂಟ್ವಾಳ ಪೋಲಿಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ.
إرسال تعليق