ಮಂಗಳೂರು: ಪೃಥ್ವಿರಾಜ್ ಮೂವೀಸ್ ಬ್ಯಾನರ್‌ನಡಿ ನಿರ್ಮಾಣವಾಗಲಿರುವ ಪ್ರಶಾಂತ್ ಆಳ್ವ ಕಲ್ಲಡ್ಕ ನಿರ್ದೇಶನದ ಅಪರಾಧಿ ನಾನಲ್ಲ... ಕನ್ನಡ ಸಿನಿಮಾದ ಚಿತ್ರೀಕರಣ ಅಕ್ಟೋಬರ್ 15ರಿಂದ ಆರಂಭವಾಗಲಿದೆ.
ಅಜಿತ್ ಚೌಟ., ಎಸ್. ಕೊಟ್ಟಾರಿ, ಜಿ. ಶೆಟ್ಟಿ ಚಿತ್ರದ ನಿರ್ಮಾಪಕರಾಗಿದ್ದು, ಚಿತ್ರಕಥೆಯನ್ನು ಸ್ವತ: ಪ್ರಶಾಂತ್ ಆಳ್ವ ಬರೆದಿದ್ದು, ಪ್ರಸನ್ನ ಕುಕ್ಕುಂದೂರು ಅವರ ಕಥೆ, ಮಣಿ ಎಜೆ, ಕಾರ್ತಿಕೇಯನ್ ಸಂಭಾಷಣೆ ಈ ಚಿತ್ರಕ್ಕಿದೆ. ವೈ.ಬಿ. ಆರ್. ಮನು ಅವರ ಛಾಯಾಗ್ರಹಣವಿದ್ದು, ರಾಜು ಆರ್ಯನ್ ಅವರ ಸಂಕಲನವಿದೆ.
ಚಿತ್ರಕ್ಕೆ ಸಚಿನ್ ಶೆಟ್ಟಿ ಕುಂಬ್ಳೆ, ರಾಕೇಶ್ ಪೂಂಜಾ ಸಾಹಿತ್ಯವಿದೆ. ಸಂದೀಪ್ ಬೆದ್ರ ಹಾಗೂ ಕರುಣಾಕರ್ ಉಡುಪಿ ಸಹ ನಿರ್ದೇಶಕರಾಗಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ. ಕನ್ನಡದ ಖ್ಯಾತ ನಟಿ ಹಾಗೂ ತುಳು ಸಿನಿಮಾ ರಂಗ ಖ್ಯಾತ ನಟ, ನಟಿಯರು ಈ ಚಿತ್ರದಲ್ಲಿ ಇದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment