ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಸ್ಸಿಂದ ಇಳಿದು ರಸ್ತೆ ದಾಟುವ ವೇಳೆ ದುರಂತ; ತಾಯಿ ಮಗಳು ಸಾವು

ಬಸ್ಸಿಂದ ಇಳಿದು ರಸ್ತೆ ದಾಟುವ ವೇಳೆ ದುರಂತ; ತಾಯಿ ಮಗಳು ಸಾವು

 


ತುಮಕೂರು: ಬಸ್ಸಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆಯಲ್ಲಿ ಕಾರು ಡಿಕ್ಕಿ ಹೊಡೆದು ತಾಯಿ, ಮಗಳು ಮೃತಪಟ್ಟಿರುವ ಘಟನೆಯೊಂದು ಬುಧವಾರ ರಾತ್ರಿ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ.


ಕಳ್ಳಂಬೆಳ್ಳ ನಿವಾಸಿಗಳಾದ ಶಾರದಮ್ಮ (45) ವರ್ಷ, ಕವಿತಾ (20) ವರ್ಷ ಮೃತಪಟ್ಟವರು.


ಕೆಲಸದ ನಿಮಿತ್ತ ಶಿರಾಗೆ ಹೋಗಿದ್ದು, ವಾಪಸ್ ಬಸ್‌ನಲ್ಲಿ ಬಂದು ಇಳಿದು ರಸ್ತೆ ದಾಟುತ್ತಿದ್ದ ಸಮಯದಲ್ಲಿ ತುಮಕೂರು ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. 


ಶಾರದಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿದ್ದ ಕವಿತಾ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಸಾವನ್ನಪ್ಪಿದ್ದಾರೆ.


ಅಪಘಾತ ಸಂಭವಿಸಿದ ನಂತರ ಕಾರು ನಿಲ್ಲಿಸದೆ ಪಾರಾರಿಯಾಗಿದ್ದ ಚಾಲಕನನ್ನು ಬೆನ್ನಟ್ಟಿ ಪೊಲೀಸರು ಹಿಡಿದಿದ್ದಾರೆ.

0 Comments

Post a Comment

Post a Comment (0)

Previous Post Next Post