ಬೆಂಗಳೂರು: ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪುನೀತ್ ಎಂಬ 24 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನ ಮೇಲೆ ಅಂಗಡಿ ಮಾಲಿಕ ಕಳ್ಳತನದ ಆರೋಪ ಹೊರಿಸಿದ್ದಕ್ಕೆ ಮನನೊಂದು ಪುನೀತ್ ಪ್ರಾಣ ಕಳೆದುಕೊಂಡರು.
ಈ ವಿಚಾರದ ಬಗ್ಗೆ ಎರಡು ಮೂರು ದಿನಗಳಿಂದಲೂ ಯುವಕ ಹಾಗೂ ಮಾಲೀಕನ ಜೊತೆ ಮಾತುಕತೆ ನಡೆಯುತ್ತಲೇ ಇತ್ತು.
ಇನ್ನೂ ಪೊಲೀಸ್ ಕಂಪ್ಲೆಂಟ್ ಕೊಡುತ್ತೇನೆ ಅಂತಾ ಮಾಲೀಕ ಯುವಕನಿಗೆ ಹೇಳಿದ್ದನಂತೆ. ಇದರಿಂದ ಮನನೊಂದ ಪುನೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Post a Comment