ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಅಂತರ್ಜಾಲ ಸುಭಾಷಿತ ಉಪನ್ಯಾಸ ಕಾರ್ಯಕ್ರಮ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಅಂತರ್ಜಾಲ ಸುಭಾಷಿತ ಉಪನ್ಯಾಸ ಕಾರ್ಯಕ್ರಮ


ಮಂಗಳೂರು: ಅಂತರ್ಜಾಲದ ಮೂಲಕ  ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕವು "ಸುಭಾಷಿತಗಳು ಜನಜೀವನದ ಮೇಲೆ ಬೀರುವ ಪ್ರಭಾವ"ದ ಕುರಿತು ಉಪಾನ್ಯಾಸ ಗೋಷ್ಠಿಯನ್ನು ಯಶಸ್ವಿಯಾಗಿ ನಡೆಸಿತು.


ವೇದಿಕೆಯ ಜಿಲ್ಲಾಧ್ಯಕ್ಷ ಡಾ ಸುರೇಶ ನೆಗಳಗುಳಿ ಇವರ ಅಧ್ಯಕ್ಷತೆಯಲ್ಲಿ ಮೂಡಿ ಬಂದ ಈ ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಹೆಸರಾಂತ ಲೆಕ್ಕ ಪರಿಶೋಧಕರೂ ಸಾಹಿತಿಗಳೂ ಸುಭಾಷಿತ ಪ್ರವೀಣರೂ ಆದ ಮಂಗಳೂರಿನ ಎಸ್ ಎಸ್ ನಾಯಕರು ಚಂದಗಾಣಿಸಿದರು.


ಅವರು ಮಾತನಾಡುತ್ತಾ, ಜೀವನದ ಹಲವು ಮಜಲುಗಳ ಮೇಲೆ ಬೆಳಕು ಚೆಲ್ಲುವ ಹಲವಾರು ಸುಭಾಷಿತಗಳನ್ನು ನಿರರ್ಗಳವಾಗಿ ಅವುಗಳ ಭಾವಾರ್ಥ ಸಹಿತವಾಗಿ ವಿವರಿಸಿದರು. ಜೀವನ ಮೌಲ್ಯ ಹಾಗೂ ಒಳ್ನುಡಿಗಳ ಮಹತ್ವವನ್ನು ಅವರು ವಿಶದೀಕರಿಸಿದರು. ಜೊತೆಗೆ ಸಂವಾದಕರಾಗಿ ಭಾಗವಹಿಸಿ ಪ್ರಶ್ನೆಗಳನ್ನು ಕೇಳಿದ ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ಎಸ್ ಎಚ್ ಶಫೀವುಲ್ಲಾ, ಉತ್ತರ ಕನ್ನಡದ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಭಾರತಿ ನಲವಡೆ ಹಾಗೂ ಇನ್ನಿತರ ಸಭಿಕರ ಸಂಶಯಗಳನ್ನು ಸುಭಾಷಿತಗಳ ಮೂಲಕವೇ ನಿವಾರಿಸಿದರು.


ಕೇಂದ್ರ ಸಾಹಿತ್ಯ ವೇದಿಕೆಯ ಪರವಾಗಿರ ವೇದಿಕೆಯ ರಾಜ್ಯ ಉಪಾಧ್ಯಕ್ಷೆ ಹುಬ್ಬಳ್ಳಿಯ ಶಾಲಿನಿ ರುದ್ರಮುನಿಯವರು ಸುಭಾಷಿತಗಳ ಜ್ಞಾನದ ಮಹತ್ವ ಹಾಗೂ ಇಂದಿನ ಯುವ ಜನಾಂಗಕ್ಕೆ ಅವುಗಳನ್ನು ತಿಳಿ ಹೇಳ ಬೇಕಾಗಿರುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು.

ಸಂಚಾಲಕರಾದ ರಾಮಕೃಷ್ಣ ಶಿರೂರು ಅವರು ಪ್ರಸ್ತಾವಿಕ ಮಾತುಗಳನ್ನಾಡುತ್ತಾ ಸುಭಾಷಿತದ ಶ್ರೇಷ್ಠತೆ, ಕಿರಿದರಲ್ಲಿ ಹಿರಿದರ್ಥ ಕೊಡುವ ಅದರ ಸಾಮರ್ಥ್ಯದ ಗುಣಗಾನ ಮಾಡಿದರು.


ಅಧ್ಯಕ್ಷ ಪೀಠದಿಂದ ಮಾತನಾಡುತ್ತಾ ಜಿಲ್ಲಾಧ್ಯಕ್ಚ ಡಾ ಸುರೇಶ ನೆಗಳಗುಳಿಯವರು ವೈದ್ಯಕೀಯ ಮಹತ್ವ ಸಾರುವ ಒಳ್ನುಡಿಗಳ ಉದಾಹರಣೆ ನೀಡುತ್ತಾ, ಅರ್ಥಗರ್ಭಿತವಾದ ಚುಟುಕು ಮಾತುಗಳು ಬಹಳ ಬೆಲೆ ಬಾಳುವ ನೀತಿ ಸಾರುತ್ತವೆ ಎಂದರು ಹಾಗೂ ಧೀರತಮ್ಮನ ಕಬ್ಬವೆಂಬ ತಮ್ಮದೇ ರಚನೆಯ ಮುಕ್ತಕವನ್ನು ವಾಚಿಸಿದರು.


ನಿರೂಪಣೆ, ಪ್ರಾರ್ಥನೆ ಸಹಿತವಾಗಿ ಸಹಕರಿಸಿದ ವೇದಿಕೆಯ ಕಾರ್ಯದರ್ಶಿ ಚಂದನಾ ಕೆ.ಎಸ್ ಹಾಗೂ ವೇದಿಕೆಯ ಮಾರ್ಗದರ್ಶಕ ಪಿಂಗಾರ ಪತ್ರಿಕೆಯ ಸಂಪಾದಕ ಶ್ರೀ ರೇಮಂಡ್ ತಾಕೊಡೆಯವರ ಧನ್ಯವಾದ ಸಮರ್ಪಣೆ ಯೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.


ಬಂಟ್ವಾಳ ತಾಲೂಕಿನ ಅಧ್ಯಕ್ಷ, ಜಿಲ್ಲಾ ನಿರ್ದೇಶಕ ಜಯಾನಂದ ಪೆರಾಜೆ, ಉಪಾಧ್ಯಕ್ಷೆ ಶ್ರೀಮತಿ ಪರಿಮಳ ಮಹೇಶ್, ಪತ್ರೂರು ತಾಲೂಕು ಅಧ್ಯಕ್ಷೆ ಶ್ರೀಮತಿ ಶಾಂತಾ ಪುತ್ತೂರು, ಲೆಕ್ಕ ಪರಿಶೋಧಕರ ಸಂಘದ ಹಲವು ಸದಸ್ಯರು ಉಪಸ್ಥಿತರಾಗಿದ್ದರು. ಸುಮಾರು ಎರಡು ಗಂಟೆಗಳ ಕಾಲ ರಾಜ್ಯ, ಹೊರ ರಾಜ್ಯ, ಹೊರದೇಶ ಸಹಿತವಾದ ವೀಕ್ಷಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


ವರದಿ- ಡಾ ಸುರೇಶ ನೆಗಳಗುಳಿ

9448216674

negalagulis@gmail.com


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post