ಪಾಣಾಜೆ: ಕರ್ನಾಟಕ ಕೇರಳ ಗಡಿ ಪ್ರದೇಶ ಬಂಟಾಜೆ ರಕ್ಷಿತಾರಣ್ಯದ ಚೆಂಡೆತ್ತಡ್ಕದ ಪರಿಸರದ ಪ್ರಸಿದ್ಧ ಪವಿತ್ರ ಪುಣ್ಯಕ್ಷೇತ್ರ ಜಾಂಬ್ರಿ ಗುಹೆಯ ಸುತ್ತ ಮುತ್ತ ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೋಳಿ ತ್ಯಾಜ್ಯ ಮತ್ತು ಮದ್ಯದ ಬಾಟಲಿಗಳನ್ನು ಕಿಡಿಗೇಡಿಗಳು ಎಲ್ಲೆಂದರಲ್ಲಿ ಎಸೆದು ಪರಿಸರ ಮಲಿನವಾಗುತ್ತಿರುವುದರಿಂದ ಸ್ವಚ್ಚತಾ ಕಾರ್ಯಕ್ರಮ ಪಾಣಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಇಂದು (ಆ.1) ನಡೆಯಿತು.
ಜಾಂಬ್ರಿ ಗುಹೆಯ ವಿಸ್ತಾರ ಪ್ರದೇಶ, ಕಳಂಜ ಗುಂಡಿ ಪ್ರದೇಶ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿ ಕೋಳಿ ತ್ಯಾಜ್ಯ ಮುಂತಾದುವುಗಳನ್ನು ಹೆಕ್ಕಿ ಗೋಣಿ ಚೀಲದಲ್ಲಿ ತುಂಬಿ ತ್ಯಾಜ್ಯ ಸಾಗಣೆ ವಾಹನದಲ್ಲಿ ತುಂಬಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಣಾಜೆ, ನೆಟ್ಟಣಿಗೆ, ಬೆಟ್ಟಂಪಾಡಿ ಗ್ರಾಮದಿಂದ ಒಟ್ಟು ಸುಮಾರು ನೂರಾರು ಮಂದಿ ಪಾಲ್ಗೊಂಡರು. ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳು ಅಗಮಿಸಿದ್ದರು.
ಸ್ವಚ್ಚತಾ ಕಾರ್ಯಕ್ರಮ ಮುಗಿದ ನಂತರ ಜಾಂಬ್ರಿ ಗುಹೆಯ ಬಳಿ ಕೃತಜ್ಞತಾ ಸಭೆ ನಡೆಯಿತು. ಪುತ್ತೂರು ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಲಿಂಗರಾಜ್, ದ.ಕ.ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್, ಸ್ವಚ್ಛತಾ ಕಾರ್ಯಕ್ರಮಕ್ಕೆ ಕಾರಣಕರ್ತರಾದ ಹಿರಿಯರಾದ ಮಹಾಬಲೇಶ್ವರ ಭಟ್ ಗಿಳಿಯಾಲು, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಭಾರತಿ ಭಟ್ ಮಾತನಾಡಿದರು.
ಪುಣ್ಯಕ್ಷೇತ್ರವನ್ನು ಹಾಳು ಮಾಡದೆ ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಜಾತಿ ಭೇದ ರಾಜಕೀಯ ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡಿದ ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಸಿ.ಎ ಬ್ಯಾಂಕ್ ನಿರ್ದೇಶಕ ರವೀಂದ್ರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್.ಕೆ, ಸದಸ್ಯರಾದ ಸುಭಾಷ್ ರೈ, ಜಯಶ್ರೀ, ಕೃಷ್ಣಪ್ಪ ಪೂಜಾರಿ, ಮೈಮುನಾತುಲ್ ಮೆಹ್ರಾ, ಸುಲೋಚನ, ವಿಮಲ, ಮೋಹನ ನಾಯ್ಕ, ಪುತ್ತೂರು ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಉಮೇಶ್ ಕೆ.ಜೆ. ಅರಣ್ಯ ವೀಕ್ಷಕ ದೇವಪ್ಪ, ಪಿಡಬ್ಲ್ಯೂಡಿ ಗುತ್ತಿಗೆದಾರ ಸದಾಶಿವ ರೈ ಸೂರಂಬೈಲು, ಸಿ.ಎ ಬ್ಯಾಂಕ್ ನಿರ್ದೇಶಕ ರವಿಶಂಕರ ಶರ್ಮ, ಪಿ.ಬಿ.ಕ್ರಿಯೇಶನ್ ಪಾಣಾಜೆ ಇದರ ಸದಸ್ಯರು, ಓಂ ಫ್ರೆಂಡ್ಸ್ ನಟ್ಟಣಿಗೆ ಸದಸ್ಯರು ಹಾಗೂ ನೂರಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಗಿಳಿಯಾಲು ಮಹಾಬಲೇಶ್ವರ ಭಟ್ ಫಲಾಹಾರ, ವಿದ್ಯಾ ಮಣ್ಣಂಗಳ ಹಾಗೂ ಉಮೇಶ್ ರೈ, ಗಿಳಿಯಾಲು ಸಿಹಿ ತಿಂಡಿ ವ್ಯವಸ್ಥೆ ಮಾಡಿದರು. ಅರ್ಲಪದವು ರಾಧಾ ಮೆಡಿಕಲ್ಸ್ ಮಾಲಕ ಬಾಲಕೃಷ್ಣ ಭಟ್ ಕೈ ಕವಚ ನೀಡಿ ಸಹಕರಿಸಿದರು. ಪಾಣಾಜೆ ಪಂಚಾಯತ್ ವತಿಯಿಂದ ಜಾಂಬ್ರಿ ಗುಹೆಯ ಪರಿಸರದಲ್ಲಿ ತ್ಯಾಜ್ಯ ಹಾಕಲು ಕಸದ ತೊಟ್ಟೆ ಇಡಲಾಗಿದೆ. ಇದಕ್ಕೆ ಖ್ಯಾತ ಚಿತ್ರಕಲಾಕಾರ ಯೋಗೀಶ್ ಕಡಂದೇಲು ಮನಮೋಹಕ ವಿನ್ಯಾಸ ಮಾಡಿದ್ದು ಎಲ್ಲರ ಗಮನ ಸೆಳೆಯುವಂತಿದೆ.
Post a Comment