ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೋಟರಿ ಕ್ಲಬ್‌ ಹಿಲ್‌ಸೈಡ್‌ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

ರೋಟರಿ ಕ್ಲಬ್‌ ಹಿಲ್‌ಸೈಡ್‌ ವತಿಯಿಂದ ಗಿಡ ನೆಡುವ ಕಾರ್ಯಕ್ರಮ


ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಹಿಲ್-ಸೈಡ್ ವತಿಯಿಂದ ಕೋಣಾಜೆಯ “ಬೆಳ್ಳೆ ಫಾರ್ಮ್”ನಲ್ಲಿ ಮಣ್ಣಿನ ಸವಕಳಿಯನ್ನು ತಡೆಯುವ ನಿಟ್ಟಿನಲ್ಲಿ 50 ಹೆಬ್ಬಲಸಿನ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ರೋಟರಿ ಅಧ್ಯಕ್ಷ ಪ್ರವೀಣಚಂದ್ರ ಶರ್ಮರು ಗಿಡಗಳನ್ನು ಕರುಣ್ ರಾವ್ ಬೆಳ್ಳೆಯವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಕರುಣ್ ರಾವ್ ಬೆಳ್ಳೆಯವರು ಪ್ರಸ್ತುತ ಪರಿಸ್ಥಿತಿಯಲ್ಲಿ ಕೃಷಿಕರು ಎದುರಿಸುತ್ತಿರುವ ಸಂಕಷ್ಟ-ಸವಾಲುಗಳ ಬಗ್ಗೆ ರೋಟರಿ ಸದಸ್ಯರ ಗಮನ ಸೆಳೆದರು.


ಕಾರ್ಯದರ್ಶಿ ರೊ.ಮನೀಶ್ ರಾವ್, ರೊ.ಡಾ।ಅಬ್ರಹಾಂ ಝಕಾರಿಯಾಸ್, ರೊ. ಶ್ಯಾಮಲಾಲ್ ವೈ, ರೊ.ಸಾಗರ್ ಪಟೇಲ್, ರೊ.ಕಿರಣ್ ಕುಮಾರ್ ಮತ್ತಿತರರು ಭಾಗವಹಿಸಿದರು. ಕೊನೆಯಲ್ಲಿ ಕಾರ್ಯದರ್ಶಿಯವರು ವಂದಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم