ಜೈಪುರ: ಬ್ಲೂಟೂತ್ ಇಯರ್ ಫೋನ್ ಸ್ಫೋಟದಿಂದ ಯುವಕನೊಬ್ಬ ಸಾವಿಗೀಡಾದ ಘಟನೆಯೊಂದು ನಡೆದಿದೆ.
ರಾಜಸ್ತಾನದ ಜೈಪುರ ಜಿಲ್ಲೆಯ ಉದಯಪುರ ಗ್ರಾಮದ ಯುವಕನೊಬ್ಬ ಬ್ಲೂಟೂತ್ ಇಯರ್ ಫೋನ್ ಸ್ಪೋಟಿಸಿ ಮೃತಪಟ್ಟಿದ್ದಾನೆ. ಬ್ಲೂಟೂತ್ ಇಯರ್ ಫೋನ್ ಕಿವಿಗೆ ಹಾಕಿಕೊಂಡು ಮಾತನಾಡುತ್ತಿದ್ದ ವೇಳೆಯಲ್ಲಿ ಈ ದುರಂತ ಸಂಭವಿಸಿದೆ.
ಇದರಿಂದ ಯುವಕನ ಎರಡೂ ಕಿವಿಗೆ ಹಾನಿಯಾಗಿದ್ದು ಇದರಿಂದ ಆಘಾತಕ್ಕೊಳಗಾದ ಯುವಕನಿಗೆ ಹೃದಯಾಘಾತವಾಗಿದೆ.
ಯುವಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಬ್ಲೂಟೂತ್ ಇಯರ್ ಫೋನ್ ಸ್ಫೋಟದ ಪರಿಣಾಮ ಆಘಾತದಿಂದ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
Post a Comment