ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಜಕೀಯ ಕ್ಕೆ ವಿದಾಯ ಘೋಷಿಸಿದ ವಿ.ಶ್ರೀನಿವಾಸ ಪ್ರಸಾದ್

ರಾಜಕೀಯ ಕ್ಕೆ ವಿದಾಯ ಘೋಷಿಸಿದ ವಿ.ಶ್ರೀನಿವಾಸ ಪ್ರಸಾದ್

 


ಮೈಸೂರು: ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ತನ್ನ ಹುಟ್ಟಹಬ್ಬದ ದಿನವೇ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ.


ಅವರು ಇದುವರೆಗೂ 14 ಚುನಾವಣೆ ಎದುರಿಸಿದ್ದು, 12ನೇ ಚುನಾವಣೆ ಸಾಕಾಗಿ ಹೋಯಿತು. ಕಂದಾಯ ಸಚಿವನಾಗಿ ಅವಧಿ ಪೂರ್ಣಗೊಳಿಸಲು ಎರಡು ವರ್ಷ ಅವಕಾಶ ನೀಡಿದ್ದರೆ ಸಾಕಿತ್ತು. 


ಅದೇ ನನ್ನ ಕೊನೆಯ ಚುನಾವಣೆ ಆಗಿದ್ದು. ಆದರೆ, ಅನಿವಾರ್ಯವಾಗಿ ಮತ್ತೆರಡು ಚುನಾವಣೆ ಎದುರಿಸಬೇಕಾಯ್ತು. ಇನ್ನೂ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಶುಕ್ರವಾರ ಮೈಸೂರಿನಲ್ಲಿ ಶ್ರೀನಿವಾಸ ಪ್ರಸಾದ್​ ಹೇಳಿದರು.


 ಚುನಾವಣಾ ರಾಜಕಾರಣ ನನಗೆ ಸಾಕಾಗಿದೆ. ಇನ್ನೂ ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎನ್ನುತ್ತಲೇ ಚುನಾವಣಾ ರಾಜಕೀಯಕ್ಕೆ ವಿ.ಶ್ರೀನಿವಾಸ ಪ್ರಸಾದ್ ಗುಡ್‌ ಬೈ ತಿಳಿಸಿದರು.

0 Comments

Post a Comment

Post a Comment (0)

Previous Post Next Post