ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜ್ಯವೆಲ್ಲರಿ ದರೋಡೆ ಪ್ರಕರಣ; ಆರೋಪಿ ಬಂಧನ

ಜ್ಯವೆಲ್ಲರಿ ದರೋಡೆ ಪ್ರಕರಣ; ಆರೋಪಿ ಬಂಧನ

 


ಕಾಸರಗೋಡು: ಮಂಜೇಶ್ವರ ಹೊಸಂಗಡಿ ರಾಜಧಾನಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ತನಿಖಾ ತಂಡ ಬಂಧಿಸಿದೆ.


ತೃಶ್ಯೂರು ಕೊಡಂಗಲ್ಲೂರಿನ ಸತ್ಯೇಶ್ ಕೆ .ಪಿ ಯಾನೆ ಕಿರಣ್ ( 35) ಬಂಧಿತ ಆರೋಪಿ .


ಈತನ ವಿರುದ್ಧ ಕೇರಳ , ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.


ಜುಲೈ 26 ರಂದು ಮುಂಜಾನೆ ದರೋಡೆ ನಡೆದಿದ್ದು, ಏಳು ಮಂದಿಯ ತಂಡವು ಕಾವಲುಗಾರ ಅಬ್ದುಲ್ಲ ರನ್ನು ಥಳಿಸಿ ಬಳಿಕ ಕಟ್ಟಿ ಹಾಕಿ ಹದಿನೈದು ಕಿಲೋ ಬೆಳ್ಳಿಯ ಆಭರಣ, ನಾಲ್ಕೂವರೆ ಲಕ್ಷ ರೂ. ನಗದು ದರೋಡೆ ಮಾಡಿದ್ದ, ದರೋಡೆಗೆ ಬಂದಿದ್ದ ಇನ್ನೋವಾ ಕಾರು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. 


ಈ ಕಾರಿನಿಂದ ಏಳು ಕಿಲೋ ಬೆಳ್ಳಿ ಆಭರಣ ಹಾಗೂ ಎರಡು ಲಕ್ಷ ರೂ. ಪತ್ತೆಯಾಗಿತ್ತು. ಉಳಿದ ಆಭರಣ ಹಾಗೂ ನಗದು ಸಹಿತ ದರೋಡೆಕೋರರು ಇನ್ನೊಂದು ಕಾರಿನಲ್ಲಿ ಪತ್ತೆಯಾಗಿದ್ದರು.


ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ವಿಶೇಷ ತಂಡ ತನಿಖೆ ನಡೆಸಿದ್ದು, ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಹಾಗೆಯೇ ಉಳಿದ ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post