ನವದೆಹಲಿ: ಅಯೋಧ್ಯೆಯ ರಾಮ ದೇಗುಲ 2023ರ ಕೊನೆಯ ವೇಳೆಗೆ ಭಕ್ತರ ದರ್ಶನಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ ಎಂದು ರಾಮ ದೇಗುಲ ಟ್ರಸ್ಟ್‌ನ ಮೂಲಗಳು ತಿಳಿಸಿವೆ.
ಆದರೆ, ಇಡೀ ದೇಗುಲದ ನಿರ್ಮಾಣ ಕಾಮಗಾರಿ ಕೆಲಸಗಳು ಸಂಪೂರ್ಣವಾಗಿ 2025ರ ವೇಳೆಗಷ್ಟೇ ಪೂರ್ಣಗೊಳ್ಳಬಹುದು ಎಂದೂ ಮೂಲಗಳು ಹೇಳಿವೆ.
ಮುಖ್ಯ ದೇಗುಲವು ಮೂರು ಮಹಡಿಗಳನ್ನು ಮತ್ತು ಐದು 'ಮಂಟಪ'ಗಳನ್ನು ಒಳಗೊಂಡಿರಲಿದೆ. ದೇಗುಲವು 360 ಅಡಿ ಉದ್ದ, 325 ಅಡಿ ಅಗಲವಿರಲಿದ್ದು, ಪ್ರತಿ ಮಹಡಿಯ ಎತ್ತರ 20 ಅಡಿಗಳಷ್ಟಿರಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು, '2023ರ ಅಂತ್ಯದ ವೇಳೆಗೆ ರಾಮ ಲಲ್ಲಾಗೆ ಪ್ರಾರ್ಥನೆ ಸಲ್ಲಿಸಲು ಭಕ್ತರಿಗೆ ರಾಮ ಮಂದಿರದ ಗರ್ಭಗುಡಿಯ ನ್ನು ತೆರೆಯಲಾಗುವುದು' ಎಂದು ಹೇಳಿದರು.
'ದೇಗುಲದ ನಿರ್ಮಾಣ ಕಾಮಗಾರಿ ಕೆಲಸಗಳು ಪ್ರಗತಿಯಲ್ಲಿದೆ. ಯೋಜನೆ ಪ್ರಕಾರ 2023 ರ ಕೊನೆಯ ವೇಳೆಗೆ 'ಗರ್ಭಗುಡಿ' ಕೆಲಸ ಪೂರ್ಣಗೊಳ್ಳಲಿದ್ದು, ಭಕ್ತರ ದರ್ಶನಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ' ಎಂದು ಮೂಲಗಳು ತಿಳಿಸಿವೆ.
Post a Comment