ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಒಂದು ವರ್ಷದ ಬಾಲಕಿಗೆ 16 ಕೋಟಿ ಇಂಜೆಕ್ಷನ್‌ ಕೊಡಿಸಿದರೂ ಉಳಿಯಲಿಲ್ಲ ಜೀವ

ಒಂದು ವರ್ಷದ ಬಾಲಕಿಗೆ 16 ಕೋಟಿ ಇಂಜೆಕ್ಷನ್‌ ಕೊಡಿಸಿದರೂ ಉಳಿಯಲಿಲ್ಲ ಜೀವ

 


ಪುಣೆ: ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಒಂದು ವರ್ಷದ ಬಾಲಕಿಯ ಚಿಕಿತ್ಸೆಗಾಗಿ ನೆರವಿನ ಹಸ್ತ ಹರಿದು ಬಂದಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.


ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ವೇದಿಕಾ ಶಿಂಧೆ ಭಾನುವಾರ ಸಂಜೆ ಸಾವಿಗೀಡಾದಳು. ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ (ಎಸ್‌ಎಂಎ) ಬಳಲುತ್ತಿದ್ದ ಈ ಬಾಲಕಿಗೆ ₹16 ಕೋಟಿ ಮೊತ್ತದ ಇಂಜೆಕ್ಷನ್‌ ಅನ್ನು ಜೂನ್‌ ತಿಂಗಳಲ್ಲಿ ನೀಡಲಾಗಿತ್ತು.


ಬಾಲಕಿಯ ಅಪರೂಪದ ಕಾಯಿಲೆ ಮತ್ತು ಚಿಕಿತ್ಸೆಗೆ ಅಗತ್ಯವಿದ್ದ ನೆರವು ನೀಡುವ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಪರಿಣಾಮ ಬೀರಿತ್ತು.  


ಇದರಿಂದಾಗಿ, ನೆಟ್ಟಿಗರು ಮತ್ತು ಇತರರು ₹14 ಕೋಟಿ ದೇಣಿಗೆ ನೀಡಿದ್ದರು. ಬಳಿಕ, ಜೂನ್‌ ತಿಂಗಳಲ್ಲಿ ಇಲ್ಲಿನ ದೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಇಂಜೆಕ್ಷನ್ ನೀಡಲಾಗಿತ್ತು.


ಬಾಲಕಿ ವೇದಿಕಾ ಆರೋಗ್ಯ ಸ್ಥಿತಿ ಇತ್ತೀಚೆಗೆ ಸುಧಾರಿಸಿತ್ತು. ಅವಳು ಬದುಕುಳಿಯುವ ಆಶಾಭಾವವೂ ಇತ್ತು. ಆದರೆ, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post