ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ 1982ರಲ್ಲಿ ನಿಟ್ಟೆ ವಿದ್ಯಾಸಂಸ್ಥೆಯಿಂದ ಸ್ಥಾಪಿತಗೊಂಡ ಎನ್.ಆರ್.ಎ.ಎಂ ಪಾಲಿಟೆಕ್ನಿಕ್ ಸತತ 39 ವರ್ಷಗಳಿಂದ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿದ್ದ ದಿ. ಕೆ. ಎಸ್. ಹೆಗ್ಢೆಯವರಿಂದ ಸ್ಥಾಪಿತವಾದ ನಿಟ್ಟೆ ವಿದ್ಯಾ ಸಂಸ್ಥೆ ಪ್ರಸ್ತುತ ಎನ್. ವಿನಯ್ ಹೆಗ್ಡೆಯವರ ನೇತೃತ್ವದಲ್ಲಿ 39 ತಾಂತ್ರಿಕ, ವೈದ್ಯಕೀಯ, ಪದವಿ, ಪದವಿಪೂರ್ವ, ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳು ನಿಟ್ಟೆ, ಮಂಗಳೂರು, ಮತ್ತು ಬೆಂಗಳೂರು ಸಂಕೀರ್ಣಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ.
ಎನ್.ಆರ್.ಏ.ಎಮ್. ಪಾಲಿಟೆಕ್ನಿಕ್ ತಾಂತ್ರಿಕ ಶಿಕ್ಷಣ ಮಂಡಳಿ, ಕರ್ನಾಟಕದೊಂದಿಗೆ ಸಂಯೋಜನೆಗೊಂಡಿದ್ದು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್, ನವದೆಹಲಿಯಿಂದ ಅಂಗೀಕೃತವಾಗಿರುತ್ತದೆ. 2001ರಿಂದ ಈ ಸಂಸ್ಥೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು, ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ತಾಂತ್ರಿಕ ಶಿಕ್ಷಣವನ್ನು ಪಡೆಯಬಹುದಾಗಿದೆ.
ಎನ್.ಆರ್.ಏ.ಎಮ್. ಪಾಲಿಟೆಕ್ನಿಕ್‌ನಲ್ಲಿ ತಾಂತ್ರಿಕ ಕೋರ್ಸುಗಳಾದ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಷನ್, ಇಲೆಕ್ಟ್ರಿಕಲ್ ಎಂಡ್ ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್‌ಸೈನ್ಸ್, ಸಿವಿಲ್, ಮತ್ತು ತಾಂತ್ರಿಕೇತರ ಕೋರ್ಸ್ ಆದ ಏ.ಡಿ.ಎಫ್.ಟಿ. ಲಭ್ಯವಿದ್ದು, ಈ ಎಲ್ಲಾ ಕೋರ್ಸುಗಳಿಗೆ ಎಸ್‌ಎಸ್‌ಎಲ್‌ಸಿ ಪೂರೈಸಿದ ಮತ್ತು ಪಿಯುಸಿ ಉತ್ತೀರ್ಣ/ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಪಾಸಾದ ಮತ್ತು, ಐಟಿಐ ಪೂರೈಸಿದ ವಿದ್ಯಾರ್ಥಿಗಳು ನೇರವಾಗಿ ಎರಡನೇ ವರ್ಷದ ತತ್ಸಂಬಂಧಿತ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶಾತಿ ಪಡೆಯಬಹುದಾಗಿದೆ.
ವಿಶಾಲವಾದ ಸಂಕೀರ್ಣ ಹೊಂದಿರುವ ಈ ಪಾಲಿಟೆಕ್ನಿಕ್‌ನಲ್ಲಿ ಸುಸಜ್ಜಿತ ಪ್ರಯೋಗಾಲಯಗಳು, ಅನುಭವೀ ಸಿಬ್ಬಂದಿಗಳು, ಇಂಟರ್ನೆಟ್ ಸೌಲಭ್ಯ, ಪ್ರಾಜೆಕ್ಟ್ ಆಧಾರಿತ ಕಲಿಕೆ, ಪ್ರತಿಯೊಬ್ಬ ವಿದ್ಯಾರ್ಥಿಗೆ ವಿಶೇಷ ಗಮನ, ಎನ್ಎಸ್ಎಸ್ ಘಟಕ, ಐಎಸ್‌ಟಿಇ ವಿದ್ಯಾರ್ಥಿ ಘಟಕ, ಪ್ಲೇಸ್‌ಮೆಂಟ್ ಘಟಕ, ಯೋಗ ತರಬೇತಿ, ರೆಡ್ ಕ್ರಾಸ್ ಘಟಕ, ಟೆಕ್ನಿಕಲ್ ಕ್ಲಬ್ ಮತ್ತು ಕುಂದುಕೊರತೆ ಪರಿಹಾರ ಘಟಕಗಳನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಉದ್ಯಮ ತಜ್ಞರಿಂದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾರ್ಗದರ್ಶನ ಕೊಡಿಸುವ ವ್ಯವಸ್ಥೆ, ಇನ್ ಪ್ಲಾಂಟ್ ತರಬೇತಿ, ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ ಕೊಡುವ ಅವಕಾಶ, ಇದರ ಮೂಲಕ ವಿದ್ಯಾರ್ಥಿಗಳ ತಾಂತ್ರಿಕ ನೈಪುಣ್ಯತೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಇಲ್ಲಿ ಉತ್ತಮ ಅವಕಾಶವಿದೆ.
ಕ್ರೀಡಾಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿರುವ ಈ ಸಂಸ್ಥೆಯಲ್ಲಿ ಒಳ ಹಾಗೂ ಹೊರ ಕ್ರೀಡಾಂಗಣಗಳನ್ನೊಳಗೊಂಡoತೆ, ಉಚಿತ ಜಿಮ್‌ನ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸ್ಥಳಗಳಿಂದ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಬಸ್ಸಿನ ವ್ಯವಸ್ಥೆ, ವೈದ್ಯಕೀಯ ಸೌಕರ್ಯ, ಬ್ಯಾಂಕ್, ಕ್ಯಾಂಟೀನ್, ಪೋಸ್ಟ್ ಆಫೀಸ್ ವ್ಯವಸ್ಥೆಗಳು ಲಭ್ಯವಿರುತ್ತವೆ.
ಪ್ರವೇಶಾತಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08258-281263/281264 (Ext. 212) ನ್ನು ಅಥವಾ ಕಾಲೇಜು ವೆಬ್ಸೈಟ್ www.nramp.nitte.edu.in ಅನ್ನು ಸಂಪರ್ಕಿಸಬಹುದು.
Post a Comment