ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಟ್ಟೆ ತಾಂತ್ರಿಕ ಕಾಲೇಜಿಗೆ 'ಐಎಸ್‍ಐಇ' ಇಂಡಿಯಾ ಸಂಸ್ಥೆಯ ಎರಡು ಪ್ರಶಸ್ತಿ

ನಿಟ್ಟೆ ತಾಂತ್ರಿಕ ಕಾಲೇಜಿಗೆ 'ಐಎಸ್‍ಐಇ' ಇಂಡಿಯಾ ಸಂಸ್ಥೆಯ ಎರಡು ಪ್ರಶಸ್ತಿ



ನಿಟ್ಟೆ: ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಇಂಜಿನಿಯರ್ಸ್ ಸಂಸ್ಥೆಯ ವತಿಯಿಂದ ಇಲೆಕ್ಟ್ರಿಕ್ ವಾಹನಗಳ ತಂತ್ರಜ್ಞಾನಾಭಿವೃದ್ಧಿಯಲ್ಲಿ ಪ್ರತಿಷ್ಠಿತ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಉಪಕ್ರಮವನ್ನು ಪರಿಗಣಿಸಿ 2020-2021 ನೇ ಸಾಲಿನ ಇ-ಮೊಬಿಲಿಟಿ ಪ್ರಶಸ್ತಿಯನ್ನು ನಿಟ್ಟೆ ತಾಂತ್ರಿಕ ಕಾಲೇಜಿಗೆ ಘೋಷಿಸಿದೆ.


'ಮುಂದಿನ ದಿನಗಳಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಬರುವ ಬೇಡಿಕೆಯನ್ನು ಮನಗಂಡ ನಮ್ಮ ಸಂಸ್ಥೆಯ ಸಂಶೋಧಕರು ತಂತ್ರಜ್ಞಾನಾಭಿವೃದ್ಧಿಯಲ್ಲಿ ವಿವಿಧ ಪ್ರಯೋಗಗಳನ್ನು ನಡೆಸುತ್ತಿದ್ದು, ಸಂಸ್ಥೆಯ ಈ ಶ್ರಮ ಹಾಗೂ ಉತ್ಸಾಹವನ್ನು ಗುರುತಿಸಿ ಐಎಸ್‍ಐಇ ಸಂಸ್ಥೆಯು ಈ ಪ್ರಶಸ್ತಿಯನ್ನು ನೀಡಿರುವುದು ಸಂಸ್ಥೆಯ ಈ ಯೋಜನೆಗೆ ಹುಮ್ಮಸ್ಸು ತಂದಿದೆ' ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post