ಮಾತು ಒಂದು ಅರ್ಥ ಹಲವು. ಮಾತೇ ಮಾಣಿಕ್ಯ ಮಾತು ಆಡಿದರೆ ಹೇೂಯಿತು, ಮುತ್ತು ಒಡೆದರೆ ಹೇೂಯಿತು ಅನ್ನುವ ಹಿರಿಯ ಮಾತು ನೂರಕ್ಕೆ ನೂರು ಸತ್ಯ. ನಾವಾಡುವ ಪ್ರತಿ ಒಂದು ಮಾತಿಗೂ ಹತ್ತು ಹಲವು ಅಥ೯ಗಳನ್ನು ಕಲ್ಪಿಸಬಹುದು. ಮಾತನಾಡಿದ ಸಂದರ್ಭ;ಮಾತನಾಡಿದ ವ್ಯಕ್ತಿ; ಮಾತನಾಡಿದವರ ಸ್ಥಾನ ಮಾನ, ಮಾತನಾಡಿದ ಧಾಟಿ.. ಹೀಗೆ ಇದರ ಆಧಾರದ ಮೇಲೆ ಮಾತಿಗೊಂದು ಅಥ೯, ಅನಥ೯, ನೆೈತಿಕತೆ, ಅನೆೈತಿಕತೆ, ಗಂಭೀರತೆ, ಹಾಸ್ಯದ ಅರ್ಥ ಪಡೆದುಕೊಳ್ಳುತ್ತಾ ಹೇೂಗುತ್ತದೆ.
ಇಂದು ನಮ್ಮ ರಾಜ್ಯದ ಗೃಹ ಸಚಿವರು ಮೈಸೂರಿನ ಹುಡುಗಿಯ ಅತ್ಯಾಚಾರ ಪ್ರಕರಣದಲ್ಲಿ ಆಡಿದ ಮಾತು ಸಾವ೯ಜನಿಕ ಚರ್ಚೆಗೆ ಗ್ರಾಸವಾಗಿದೆ. ಹಾಗಾಗಿ ಸಾವ೯ಜನಿಕ ಹಿತದೃಷ್ಟಿಯಿಂದ ಆವಲೋಕಿಸ ಬೇಕಾದ ಸಂದರ್ಭ ಬಂದಿದೆ. ಮಾನ್ಯ ಗೃಹ ಸಚಿವರು ಹೇಳಿದ ಮಾತು "ಮೊದಲಾಗಿ ಆ ಹುಡುಗಿ ಕತ್ತಲ ಹೊತ್ತಿನಲ್ಲಿ ಆ ನಿರ್ಜನವಾದ ಸ್ಥಳಕ್ಕೆ ಹೇೂಗಬಾರದಿತ್ತು. "ಈ ಮಾತು ಯಾಕೆ ಇಷ್ಟೊಂದು ಚರ್ಚೆಗೆ ಗ್ರಾಸವಾಗಿದೆ ಅಂದರೆ ರಾಜ್ಯದ ಜನರ ಸ್ಥಾನಮಾನ ಭದ್ರತೆ ಕಾಪಾಡಬೇಕಾದ ಉನ್ನತ ಸ್ಥಾನದಲ್ಲಿರುವ ಗೃಹ ಸಚಿವರ ಬಾಯಿಯಿಂದ ಬಂದ ಕಾರಣ ಇದಕ್ಕೊಂದು ಅನಥ೯ವಾದ ಅಥ೯ ಕಲ್ಪಿಸಲಾಗಿದೆ. ಇಲ್ಲಿ ಇದು ಏನು ಸೂಚಿಸುತ್ತದೆ ಅಂದ್ರೆ "ಇದು ನಮ್ಮ ತಪ್ಪಲ್ಲ ಸಂಬಂಧಿಸಿದ ಹುಡುಗಿಯದ್ದೇ ತಪ್ಪು. ಎಲ್ಲಾ ಕಡೆ ಎಲ್ಲಾ ಸಂದರ್ಭದಲ್ಲಿ ನಿಮಗೆ ಭದ್ರತೆವಹಿಸಲು ಸಾಧ್ಯವಿಲ್ಲ ಮಾತ್ರವಲ್ಲ ನೀವು ಮಹಿಳೆಯರು ನಿಮ್ಮ ಜಾಗೃತಿಯ ಕಡೆಗೆ ಗಮನ ಹರಿಸ ಬೇಕಾಗಿತ್ತು..."
ಅದಕ್ಕೆ ಈಗ ಜನ ಕೇಳುವುದು ಹಾಗಾದರೆ ನಮ್ಮ ಜಾಗ್ರತೆ ನಾವೇ ವಹಿಸಿಕೊಳ್ಳುವುದಾದರೆ ಯಾವ ಗ್ರಹಚಾರಕ್ಕೆ ಬೇಕು ನಿಮ್ಮ ಗೃಹ ಇಲಾಖೆ."
ಇಂದು ಸಚಿವ ಆರಗ ಜ್ಞಾನೇಂದ್ರರು ಒಬ್ಬ ಸಾಮಾಜದ ಹಿರಿಯ ವ್ಯಕ್ತಿಯಾಗಿ ಗುರುವಿನ ಸ್ಥಾನದಲ್ಲಿ ನಿಂತು ಹೇಳಿದ್ದರೆ ಎಲ್ಲರೂ ಒಪ್ಪಿಕೊಳ್ಳಬಹುದಾದ ಸಹ್ಯವಾದ ಉಪದೇಶದ ಮಾತು ಅನ್ನಿಸಿ ಕೊಳ್ಳುತ್ತಿತ್ತು.
ಸಂಘ ಪರಿವಾರದಲ್ಲಿ ಬೆಳೆದು ಬಂದವರ ಒಂದು ಗುಣವೆಂದರೆ ನಮ್ಮ ಮಹಿಳೆಯರ ಮೇಲೆ ಗೌರವ ಪ್ರೀತಿ ಜಾಸ್ತಿ. ಹಾಗಾಗಿ ಅರಗರು ಕಾನುಾನಿ ಪರಿಧಿ ಮೀರಿ ವಾತ್ಸಲ್ಯ ಪ್ರೀತಿ ಜಾಸ್ತಿ ತೇೂರಿಸಿ ಮಾತಿನಲ್ಲಿ ಸಿಕ್ಕಿ ಹಾಕಿ ಕೆುಾಂಡಿದ್ದಾರೆ ಅನ್ನುವುದು ಅಷ್ಟೇ ಸತ್ಯ. ಅಂತುಾ ಅರಗರ ಈ ಮಾತು ಅರಗಿಸಿ ಕೊಳ್ಳಲು ಸಾಧ್ಯವಾಗದ ಮಾನ್ಯ ಮುಖ್ಯಮಂತ್ರಿಗಳು ಕೂಡಾ ಗೃಹ ಸಚಿವರಿಂದ ಸ್ವಷ್ಟೀಕರಣ ಕೇಳಿದ್ದಾರೆ ಅನ್ನಿಸುತ್ತದೆ. ಅಂತೂ ನಮ್ಮ ಸಚಿವರ ಮಾತಿನ ಮೇಲ್ಲೊಂದು ಲಘು ಟಿಪ್ಪಣಿ ಬರೆಯುವ ಕಾಲ ಕೂಡಿ ಬಂದಿದೆ. ಮಾತ್ರವಲ್ಲ ನಮ್ಮ ಎಲ್ಲಾ ಜನ ಪ್ರತಿನಿಧಿಗಳಿಗೆ ಇದು ಪಾಠವಾಗಬೇಕು. ನಿಮ್ಮ ಅಭಿಪ್ರಾಯಕ್ಕೂ ಸ್ಥಳವಿದೆ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment