ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಮೀನು ವಿಚಾರ; ಒಂದೇ ಕುಟುಂಬದ ನಾಲ್ವರು ಸಹೋದರರ ಕೊಲೆ

ಜಮೀನು ವಿಚಾರ; ಒಂದೇ ಕುಟುಂಬದ ನಾಲ್ವರು ಸಹೋದರರ ಕೊಲೆ

 



ಬಾಗಲಕೋಟೆ : ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬವೊಂದನ್ನು ದಾರುಣವಾಗಿ ಹತ್ಯೆ ಮಾಡಿದ ಘಟನೆಯೊಂದು ನಡೆದಿದೆ.


ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಧುರ ಖಂಡಿಯಲ್ಲಿ ಜಮೀನಿಗೆ ಸಂಬಂಧಿಸಿದ ವಿಚಾರಕ್ಕೆ ಆ.28 ರಂದು ಒಂದೇ ಕುಟುಂಬ ದ ನಾಲ್ವರು ಸಹೋದರರನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ.


ಸೋದರರಾದ ಹನುಮಂತ ಉದಗಟ್ಟಿ(45), ಮಲ್ಲಪ್ಪ ಉದಗಟ್ಟಿ (35), ಬಸಪ್ಪ ಉದಗಟ್ಟಿ (37), ಈಶ್ವರ ಉದಗಟ್ಟಿ(35) ಹತ್ಯೆಗೀಡಾದವರು.


ತೋಟದ ಮನೆಯೊಂದರಲ್ಲಿ ನಾಲ್ವರು ಸಹೋದರನ್ನು ದುಷ್ಕರ್ಮಿಗಳು ದಾರುಣವಾಗಿ ಹತ್ಯೆಗೈದಿದ್ದಾರೆ.  


ವಿಷಯ ತಿಳಿದು ಜಮಖಂಡಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತನಿಖೆ ಆರಂಭಿಸಿದ್ದಾರೆ.


ಆಸ್ತಿ ಸಲುವಾಗಿ ಹಲವಾರು ವರ್ಷಗಳಿಂದ ‌ಮನೆತನದ ನಡುವೆ ಜಗಳ ಇತ್ತು.


 ಆ ಒಂದು ಜಗಳದಿಂದ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ

0 Comments

Post a Comment

Post a Comment (0)

Previous Post Next Post