ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಸಂಘಟಿತ ಪುರೋಹಿತ ಕಾರ್ಮಿಕರ ಸಂಘದಿಂದ ಡಾ. ಕಲ್ಲಡ್ಕ ಪ್ರಭಾಕರ ಭಟ್ಟರ ಭೇಟಿ, ಮನವಿ ಸಲ್ಲಿಕೆ

ಅಸಂಘಟಿತ ಪುರೋಹಿತ ಕಾರ್ಮಿಕರ ಸಂಘದಿಂದ ಡಾ. ಕಲ್ಲಡ್ಕ ಪ್ರಭಾಕರ ಭಟ್ಟರ ಭೇಟಿ, ಮನವಿ ಸಲ್ಲಿಕೆ




ಮಂಗಳೂರು: ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಶಾಖೆಯ ಪದಾಧಿಕಾರಿಗಳ ನಿಯೋಗವು ಇಂದು ಹಿರಿಯ ಆರೆಸ್ಸೆಸ್‌ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.


ಅಸಂಘಟಿತ ಪುರೋಹಿತ ಕಾರ್ಮಿಕರು, ಅರ್ಚಕ ಹಾಗೂ ಅಡುಗೆ ವೃತ್ತಿಯ ಸಹಾಯಕರು ಪ್ರಸ್ತುತ ಸಂಕಟದ ಪರಿಸ್ಥಿತಿಯಲ್ಲಿ ಸರಕಾರದ ನೆರವಿನಿಂದ ವಂಚಿತರಾಗಿದ್ದು, ಅವರನ್ನು ಸರಕಾರದ ನೆರವಿನ ವ್ಯಾಪ್ತಿಗೆ ತರುವ ಪ್ರಯತ್ನವನ್ನು ಈ ಸಂಘಟನೆ ಮಾಡುತ್ತಿದೆ.


ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಸ್ತರಗಳಲ್ಲಿ ಸರಕಾರದಿಂದ ಅಸಂಘಟಿತ ಪುರೋಹಿತ-ಕಾರ್ಮಿಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಡಾ. ಪ್ರಭಾಕರ ಭಟ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.


ಇಂದಿನ ನಿಯೋಗದಲ್ಲಿ ದ.ಕ-ಉಡುಪಿ ಜಿಲ್ಲಾ ಶಾಖೆಯ ಅಧ್ಯಕ್ಷ ಪ್ರಕಾಶ್ ವಿ ಹೊಳ್ಳ, ಗೌರವಾಧ್ಯಕ್ಷ ಕೆ.  ರಘುರಾಮ ರಾವ್, ಕಾರ್ಯದರ್ಶಿ ಸುಬ್ರಹ್ಮಣ್ಯ ಮಯ್ಯ, ಸದಸ್ಯರಾದ ಶ್ರೀಧರ ರಾವ್ ಸೇರಿದ್ದರು.


1 تعليقات

إرسال تعليق

Post a Comment

أحدث أقدم