ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್‍ಸೈನ್ಸ್ ವಿಭಾಗದ 6ನೇ ಸೆಮಿಸ್ಟರ್ ಬಿ.ಇ ವಿದ್ಯಾರ್ಥಿಗಳ ತಂಡವು ತಯಾರಿಸಿರುವ ‘ಸಿಮುಲೇಶನ್ ಆಫ್ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟ್’ ಎಂಬ ಪ್ರಾಜೆಕ್ಟ್‍ನ್ನು ಐಇಇಇ ಎಂ.ಎಂ.ಎಸ್ ಆಯೋಜಿಸಿದ್ದ ‘ಐ2 ಕನೆಕ್ಟ್’ ಎಂಬ ಸ್ಪರ್ಧೆಯಲ್ಲಿ ಪ್ರದರ್ಶಿಸಿ ಎರಡನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದೆ.
ಈ ತಂಡವು ತಮ್ಮ ಮಿನಿ ಪ್ರಾಜೆಕ್ಟ್‍ನ್ನು ‘ಐಒಟಿ’ ಎಂಬ ವಿಷಯದಡಿಯಲ್ಲಿ ಕಂಪ್ಯೂಟರ್‍ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ವೇಣುಗೋಪಾಲ ಪಿ.ಎಸ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರದೀಪ್ ಕಾರಂತ್ ಇವರ ಮಾರ್ಗದರ್ಶನದಲ್ಲಿ ತಯಾರಿಸಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment