ಕೊಡಗು: ಗಡಿಯಲ್ಲಿ ಸರ್ಕಾರಿ ಬಸ್ ಐರಾವತ ಅಪಘಾತ ಸಂಭವಿಸಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯೊಂದು ಸೋಮವಾರ ಮುಂಜಾನೆ ನಡೆದಿದೆ. ಬೆಂಗಳೂರು ಮೂಲದ ಸ್ವಾಮಿ ಮೃತಪಟ್ಟ ಚಾಲಕ.
ಗಡಿ ಪೆರುಂಬಾಡಿಯಿಂದ 8 ಕಿ.ಮೀ. ದೂರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಟೇರಿಂಗ್ ಅಡಿಗೆ ಸಿಲುಕಿ ಮೃತಪಟ್ಟಿದ್ದಾನೆ.
ಕೇರಳ ಟಾಸ್ಕ್‌ಫೋರ್ಸ್‌ನಿಂದ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತು.
Post a Comment