ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ: ಜನರ ಜಿಲ್ಲಾಧಿಕಾರಿಯಾಗಿದ್ದ ಜಿ ಜಗದೀಶ್ ಇನ್ನು ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿ

ಉಡುಪಿ: ಜನರ ಜಿಲ್ಲಾಧಿಕಾರಿಯಾಗಿದ್ದ ಜಿ ಜಗದೀಶ್ ಇನ್ನು ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿ




 "ನಾನು ನಿಮ್ಮ ಜಿಲ್ಲಾಧಿಕಾರಿ" ಅನ್ನುವ ಮಾತಿನೊಂದಿಗೆ ಪರಿಚಯಿಸಿಕೊಳ್ಳುವ ಜಿ. ಜಗದೀಶ್ ನಮ್ಮ ಮನಸ್ಸಿನಲ್ಲಿ ಸದಾ ನೆನಪಿನಲ್ಲಿ ಉಳಿಯುವ ವ್ಯಕ್ತಿತ್ವದ ಜಿಲ್ಲಾಧಿಕಾರಿ ಅನ್ನುವುದು ನನ್ನ ಅನುಭವದ ಮಾತು. ಅವರಲ್ಲಿ ಇರುವ ವಿಶೇಷ ಗುಣವೆಂದರೆ ತಾನು ಜಿಲ್ಲೆಯ ಒಬ್ಬ ಮ್ಯಾಜಿಸ್ಟ್ರೇಟ್ ಅನ್ನುವ ಹಮ್ಮು ಗಿಮ್ಮು ಇಲ್ಲ. ಸೀದಾಸಾದಾ ಮಾತುಕತೆ. ತಾನು ಹೇಗೆ ಬದುಕನ್ನು ದಾಟಿ ಬಂದೆ ಅನ್ನುವ ಬಾಲ್ಯದ ನೆನಪು ಇಂದಿಗೂ ಅವರು ಮರೆತಿಲ್ಲ. ಅದನ್ನು ಎಷ್ಟೋ ಬಾರಿ ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ. ಇದು ನಮ್ಮ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿರುವುದು ಅಷ್ಟೇ ಸತ್ಯ.


ಉಡುಪಿ ಜಿಲ್ಲೆಯ ಅಧಿಕಾರಿಯಾಗಿ ಬರುವಾಗ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಾಕಷ್ಟು ಕನಸುಗಳನ್ನು ಹೊತ್ತು ಬಂದವರು. ಆದರೆ ಕೊರೊನ ನಿಯಂತ್ರಣವೇ ದೊಡ್ಡ ಸವಾಲಾಗಿ ಬಂದ ಕಾರಣ ಪೂತಿ೯ ಶ್ರಮ ಬೇರೆ ಕಡೆ ಹರಿಸಲು ಸಾಧ್ಯವಾಗಿಲ್ಲ ಅನ್ನುವುದು ಅಷ್ಟೇ ಸತ್ಯ.


ಜಿಲ್ಲಾ ಮಟ್ಟದ ಅಧಿಕಾರಿ ಅಂದಾಗ ರಾಜಕೀಯ ಒತ್ತಡ ಜನರ ಬೇಡಿಕೆಗಳು ಕೊರೊನಾ ನಿಯಂತ್ರಣ ಇಂತಹ ಹತ್ತು ಹಲವು ಸವಾಲುಗಳನ್ನು ದಿನನಿತ್ಯವೂ ಎದುರಿಸಬೇಕಾದ ಸವಾಲುಗಳು ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.


ಸರಿ ನನಗೂ ನಮ್ಮ ಜಿಲ್ಲಾಧಿಕಾರಿಗಳ ನಡುವೆ ಒಂದು ಅಭಿಮಾನದ ಸಂಬಂಧವೆಂದರೆ ಅವರೂ ಕೂಡಾ ರಾಜ್ಯ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಧರರು. ಸಾವ೯ಜನಿಕ ಆಡಳಿತ ಅಧ್ಯಯನ ಮಾಡಿದ ಜಿ. ಜಗದೀಶರು ನನಗೆ ತೀರ ಹತ್ತಿರವಾಗಿ ಬಿಟ್ಟರು. ಅದೆಷ್ಟೊ ಬಾರಿ ಅವರ ಕೆಲವೊಂದು ನಿರ್ಧಾರಗಳನ್ನು ನಾನು ಟೀಕೆ ಮಾಡಿದ್ದು ಇದೆ. ಅದು ಬರೇ ಆಡಳಿತಾತ್ಮಕ ಟೀಕೆ ನಿರೂಪಣೆ ಬಿಟ್ಟರೆ ವೆೈಯಕ್ತಿಕ ಟೀಕೆ ಅಲ್ಲ, ಆಗಲೂ ಬಾರದು.


ಕೃಷಿ ಹಸಿರು ಪರಿಸರ ಪ್ರೇಮಿ ಅನ್ನಿಸಿಕೊಂಡ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತಮ್ಮದೇ ಆದ ನಡೆ ನುಡಿಯ ಮೂಲಕ ಜಿಲ್ಲೆಯ ಜನರ ಮನಸ್ಸು ಗೆದ್ದಿರುವುದು ಅಷ್ಟೇ ಸತ್ಯ. ಮುಂದೆ ಅವರು ಇನ್ನೂ ಹೆಚ್ಚಿನ ಜವಾಬ್ದಾರಿ ಸ್ಥಾನವಾದ ಮುಖ್ಯಮಂತ್ರಿ ಕಛೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿರುವುದು ಉಡುಪಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಹಾಯಕವಾಗಲಿ ಅನ್ನುವುದು ನಮ್ಮೆಲ್ಲರ ಆಶಯವೂ ಹೌದು. ಉಡುಪಿಯಿಂದ ವಗ೯ವಾಗಿ ತೆರಳುತ್ತಿರುವ ಜಿ. ಜಗದೀಶ್ ರಿಗೆ ಹಾದಿ೯ಕ ಶುಭ ವಿದಾಯ.


-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post