ರಾಮನಗರ: ಸ್ವಿಫ್ಟ್ ಕಾರ್ನಲ್ಲಿ ಜಿಲೆಟಿನ್ ಸಾಗಾಟದ ವೇಳೆಯಲ್ಲಿ ಜಿಲೆಟಿನ್ ಸ್ಫೋಟಗೊಂಡು ವ್ಯಕ್ತಿ ಸಾವನ್ನಪ್ಪಿರುವ ಘಟನೆಯೊಂದು ಕನಕಪುರದ ಮರಳೆಗವಿ ಮಠದಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಕ್ವಾರೆಯೊಂದಕ್ಕೆ ಜಿಲೆಟಿನ್ ವಸ್ತು ಸಾಗಿಸುವಾಗ ದುರಂತ ನಡೆದಿದೆ.
ಮಹೇಶ್ ಸಾವನ್ನಪ್ಪಿರುವ ವ್ಯಕ್ತಿ. ಸ್ಫೋಟದ ರಭಸಕ್ಕೆ ವ್ಯಕ್ತಿಯ ದೇಹ ಛಿದ್ರಛಿದ್ರವಾಗಿದ್ದು, ಮಹೇಶ್ ಮೂಲತಃ ಕನಕಪುರ ನಿವಾಸಿಯಾಗಿದ್ದು ಕನಕಪುರ ನಗರದಲ್ಲಿ ಹಾರ್ಡ್ ವೇರ್ ಅಂಗಡಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಿಲೆಟಿನ್ ಸ್ಫೋಟಗೊಂಡ ವೇಳೆಗೆ ಸ್ವಿಫ್ಟ್ ಕಾರ್ ಧಗ ಧಗನೆ ಹೊತ್ತು ಉರಿದಿದೆ.
ಶಕ್ತಿ ಮೈನಿಂಗ್ಸ್ ಎಂಬ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಡಿ ಮದ್ದುಗಳನ್ನು ಕಾರಿನಲ್ಲಿ ಸಾಗಿಸುವಾಗ ಸ್ಫೋಟ ನಡೆದಿದೆ.
ಕೆ.ಎ 51 ಪಿ 3384 ಸ್ವಿಫ್ಟ್ ಕಾರಿನಲ್ಲಿ ಸಿಡಿ ಮದ್ದುಗಳನ್ನು ಸಾಗಿಸುವಾಗ ಈ ಘಟನೆ ನಡೆದಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment