ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಾತಿ ಮೀರಿದ ರಾಜಕಾರಣ ಪ್ರಯೇೂಗಶೀಲತೆ ಅರಸರ ಉತ್ಕೃಷ್ಟ ಗುಣ: ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ

ಜಾತಿ ಮೀರಿದ ರಾಜಕಾರಣ ಪ್ರಯೇೂಗಶೀಲತೆ ಅರಸರ ಉತ್ಕೃಷ್ಟ ಗುಣ: ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ



ಉಡುಪಿ: ದಿವಂಗತ ಡಿ.ದೇವರಾಜ ಅರಸರು ಈ ನಾಡು ಕಂಡ ಒಬ್ಬ ಶ್ರೇಷ್ಠ ಮುಖ್ಯಮಂತ್ರಿ ಅನ್ನುವ ಕೀತಿ೯ಗೆ ಭಾಜನರಾಗಿರುವುದು ಜಾತಿ ಆಧರಿತ ರಾಜಕಾರಣದಿಂದಾಗಿ ಅಲ್ಲ. ಬದಲಾಗಿ ಅವರಲ್ಲಿರುವ ಜಾತಿಮೀರಿದ ರಾಜಕಾರಣ ಆಡಳಿತದಲ್ಲಿ ಪ್ರಯೇೂಗ ಶೀಲತೆ, ಅವರ ಪ್ರತಿಯೊಂದು ನಿಧಾ೯ರ ದೀನ ದಲಿತರ ಹಿಂದುಳಿದ ವಗ೯ದ ಶ್ರೇಯೋಭಿೃದ್ದಿಯೂ ದಿಕ್ಕಿನಲ್ಲಿಯೇ ಸಾಗಿತ್ತು. ಭೂಸುಧಾರಣಾ ಕಾನೂನನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೀತಿ೯ ಅರಸರಿಗೆ ಸಲ್ಲುತ್ತದೆ. ಅರಸರ ಆಡಳಿತದ ಅವಧಿ ಸಾವ೯ತ್ರಿಕ ಸಾವ೯ಕಾಲಿಕವಾಗಿ ನೆನಪಿಸಬೇಕಾದ ಅರಸು ಯುಗವನ್ನೇ ಸೃಷ್ಟಿ ಮಾಡಿದೆ" ಎಂದು ಅಂಕಣಕಾರ ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.


ಉಡುಪಿ ಜಿಲ್ಲಾ ಹಿಂದುಳಿದ ವಗ೯ದ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸುರವರ 106ನೇ ಜನ್ಮದಿನಾಚರಣೆ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸವಿತ್ತು ಮಾತನಾಡಿದರು.


ಸಭಾಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ವಹಿಸಿ ಹಿಂದುಳಿದ ವಸತಿ ನಿಲಯದ ವಿಶೇಷ ಸಾಧನೆಗೆೈದ ವಿದ್ಯಾರ್ಥಿಗಳನ್ನು ಮತ್ತು ಸಿಬಂದಿಗಳನ್ನು ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ ನಿವ೯ಣಾಧಿಕಾರಿ ಡಾ.ನವೀನ್ ಭಟ್ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸದ್ಬಾವನಾ ಪ್ರಮಾಣ ವಚನ ಬೇೂಧಿಸಿದರು. ಜಿಲ್ಲಾ ಹಿಂದುಳಿದ ವಗ೯ದ ಕಲ್ಯಾಣ ಇಲಾಖಾ ಅಧಿಕಾರಿ ದೇವೇಂದ್ರ ಬಿರಾದಾರ್ ಸ್ವಾಗತಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ





0 Comments

Post a Comment

Post a Comment (0)

Previous Post Next Post