ಮೈಸೂರು: ಪತಿ-ಪತ್ನಿಯ ಕಲಹ ಸಾವಿನಲ್ಲಿ ಅಂತ್ಯಗೊಂಡ ಘಟನೆಯೊಂದು ನಂಜನಗೂಡು ತಾಲ್ಲೂಕಿನ ಇಮ್ಮಾವುಹುಂಡಿಯಲ್ಲಿ ನಡೆದಿದೆ. ಮೃತರನ್ನು ಇಮ್ಮಾವುಹುಂಡಿ ವಾಸಿಗಳಾದ ಬಸವರಾಜು (35) ವರ್ಷ ಹಾಗೂ ಶೋಭಾ (28) ವರ್ಷ ಎಂದು ಗುರುತಿಸಲಾಗಿದೆ
ದಂಪತಿಗಳ ನಡುವೆ ಕ್ಷುಲ್ಲಕ ವಿಷಯಕ್ಕೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಜಿಗುಪ್ಸೆಗೊಂಡ ಶೋಭಾ ರಾಂಪುರ ನಾಲೆಗೆ ಹಾರಿದ್ದಾರೆ.
ಪತ್ನಿ ನಾಲೆಗೆ ಹಾರಿದ್ದನ್ನು ಕಂಡ ಪತಿ ಬಸವರಾಜು ಕೂಡ ನಾಲೆಗೆ ಹಾರಿ ಸಾವನ್ನಪ್ಪಿದ್ದಾರೆ. ದಂಪತಿಗೆ ಐದು ವರ್ಷದ ಮಗು ಇದ್ದು, ಆಲತ್ತೂರು ಬಳಿಯ ನಾಲೆಯಲ್ಲಿ ಶೋಭಾ ಅವರ ಮೃತದೇಹ ಪತ್ತೆಯಾಗಿದೆಯಾದರೂ, ಬಸವರಾಜು ಅವರ ದೇಹ ದೊರೆತಿಲ್ಲ ಎನ್ನಲಾಗಿದೆ.
ಈ ಬಗ್ಗೆ ಶೋಭಾ ಅವರ ಸಹೋದರ ಚಂದ್ರ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.
ನಂಜನಗೂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸ್ಥಳಕ್ಕೆ ಎಎಸ್‍ಪಿ ಶಿವಕುಮಾರ್, ಡಿವೈಎಸ್‍ಪಿ ಗೋವಿಂದರಾಜು, ನಿರೀಕ್ಷಕ ಶಿವನಂಜಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
إرسال تعليق