ಮಂಗಳೂರು: ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು (ಶುಕ್ರವಾರ, ಆ.20) ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಘಟಕ ಮಂಗಳೂರು ಇದರ ಉಸ್ತುವಾರಿಯಲ್ಲಿ ಕೃಷ್ಣಾಪುರ ಸುರತ್ಕಲ್ ನಲ್ಲಿ ಸಂಘದ ಸದಸ್ಯರಾದ ನಟೇಶ್ ಅಮ್ಮಣ್ಣಾಯ ಹಾಗೂ ಸುಧೀರ್ ರಾವ್ ಇವರ ಇ-ಸೇವಾ ಕೇಂದ್ರ ಶ್ರೀ ಮಾತಾ ಎಂಟರ್ಪ್ರೈಸಸ್ ನ ಉದ್ಘಾಟನಾ ಸಮಾರಂಭ ನೆರವೇರಿತು.
ಸಂಘದ ದ.ಕ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ ವಿ ಹೊಳ್ಳ ಶಕ್ತಿನಗರ ಹಾಗೂ ಗೌರವಾಧ್ಯಕ್ಷರಾದ ರಘುರಾಮ ರಾವ್ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು. ಇ-ಸೇವಾ ಕೇಂದ್ರ ಕಚೇರಿಯಲ್ಲಿ ಘನ ಸರ್ಕಾರದ ಅಂಗೀಕೃತವಾದ ಸಕಲ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಅಧ್ಯಕ್ಷರಾದ ಪ್ರಕಾಶ್ ಹೊಳ್ಳ ರವರು ತಿಳಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment