ಉಡುಪಿ: ಕೌಟಿಲ್ಯನ ಮಂಡಲ ಸಿದ್ಧಾಂತವನ್ನೇ ಸುಳ್ಳಾಗಿಸಿದ ಅಫ್ಘಾನಿಸ್ತಾನ ಪಾಕ್ ಚೀನಾ ರಷ್ಯಾ ದೇಶಗಳ ಸ್ವಾಥ೯ ಮಾನವೀಯತೆ ಮರೆತ ಸ್ನೇಹ ಸಂಬಂಧಗಳು. ಅಫ್ಘಾನಿಸ್ತಾನದ ಹುಟ್ಟು ಬೆಳವಣಿಗೆಯನ್ನು ನೋಡಿದರೆ ಮೊದಲಿನಿಂದಲೂ ಅದೊಂದು ಸುದೃಢ ಸಿದ್ಧಾಂತವಿಲ್ಲದ ಅರಾಜಕತೆಯ ತಾಣ. ಹಾಗಾಗಿ ಮನುಷ್ಯತ್ವ ಮರೆತ ದೇಶಗಳು ತಮ್ಮ ಸ್ವಾಥ೯ಕ್ಕಾಗಿ ಖನಿಜ ಸಂಪತ್ತಿನ ಗುಡ್ಡಗಾಡಿನ ದೇಶವನ್ನು ಆಟದ ಮೈದಾನವಾಗಿ ಬಳಸಿ ಕೊಂಡ ಪರಿಣಾಮವೇ ಇಂದಿನ ಅಫ್ಘಾನಿಸ್ತಾನ ದುಃಸ್ಥಿತಿಗೆ ಕಾರಣವಾಗುತ್ತಿರುವುದು ವಿಷಾದನೀಯ. ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ದೇಶ ಹುಟ್ಟಿ ಬರಬಹುದು ಎಂಬ ನಿರೀಕ್ಷೆಯಲ್ಲಿತ್ತು. ಆದರೆ ಇದು ಇಂದಿನ ತಾಲಿಬಾನರಿಂದ ಸಾಧ್ಯವಿಲ್ಲ ಅನ್ನುವುದು ವೇದ್ಯವಾಗುತ್ತಿದೆ. ಭಯೋತ್ಪಾದನೆ ಮತ್ತೆ ತಲೆ ಎತ್ತದ ಹಾಗೆ ಜಾಗೃತೆಯ ನಡೆ ನಮ್ಮದಾಗ ಬೇಕಾಗಿದೆ" ಎಂದು ಅಂಕಣಕಾರ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.
ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಭಾರತ್ ವಿಕಾಸ ಪರಿಷತ್ ವತಿಯಿಂದ ನಡೆದ ತಿಂಗಳ ಉಪನ್ಯಾಸ ಮಾಲಿಕೆಯಲ್ಲಿ "ಅಫ್ಘಾನಿಸ್ತಾನದ ಅರಾಜಕತೆ ಏಷ್ಯಾದ ಮೇಲಿನ ಪರಿಣಾಮ ಮತ್ತು ಭಾರತದ ನಿಲುವು" ಕುರಿತಾಗಿ ಮಾತನಾಡಿ ಅಭಿಪ್ರಾಯಿಸಿದರು. ವೇದಿಕೆ ಅನೇಕ ಹಿರಿಯರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಷಯ ಮಂಡಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment