ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಫೋಟೋ ಶೂಟ್ ಮೂಲಕ ವಾಗಿ ಇತ್ತೀಚೆಗೆ ಹೆಚ್ಚು ಪ್ರಚಾರದಲ್ಲಿದ್ದಾರೆ.
ಇದೀಗ ಮಗಳ ಜೊತೆಗೆ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಮಗಳ ಜೊತೆ ಒಂದೇ ತರಹದ ಒಂದೇ ಬಣ್ಣದ ಬಟ್ಟೆ ಟ್ವಿನ್ನಿಂಗ್ ಮಾಡುವ ಮೂಲಕವೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ.
ಈ ಸೆಲೆಬ್ರಿಟಿ ಅಮ್ಮ-ಮಗಳ ಟ್ವಿನ್ನಿಂಗ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸೆಲೆಬ್ರಿಟಿ ಅಮ್ಮ-ಮಗಳು ಒಂದೇ ತರಹದ ವಿನ್ಯಾಸಿತ ಡ್ರೆಸ್ ತೊಟ್ಟು ಫೋಟೋ ಶೂಟ್ ನಲ್ಲಿ ಮಿಂಚಿದ್ದಾರೆ.
ಹಾಫ್ ಶೋಲ್ಡರ್ ಗೌನ್ನಲ್ಲಿ ಶ್ವೇತಾ ಶ್ರೀವಾತ್ಸವ್ ಹಾಗೂ ಅವರ ಮಗಳು ಅಶ್ಮಿತಾ ಮಿಂಚಿದ್ದಾರೆ.
ಶ್ವೇತಾ ಶ್ರೀವಾತ್ಸವ್ ಮಗಳ ಜೊತೆ ಸ್ಟೈಲಿಶ್ ಫೋಟೋ ಶೂಟ್ ಗೆ ಪೋಸ್ ಕೊಟ್ಟಿದ್ದಾರೆ.
ಅಮ್ಮ-ಮಗಳ ಟ್ವಿನ್ನಿಂಗ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Post a Comment