ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಟಿ ರಕ್ಷಿತಾ ಪ್ರೇಮ್ ಮನೆಯ ಹೊರಾವರಣದಲ್ಲಿ ಕಳ್ಳತನ

ನಟಿ ರಕ್ಷಿತಾ ಪ್ರೇಮ್ ಮನೆಯ ಹೊರಾವರಣದಲ್ಲಿ ಕಳ್ಳತನ

 



ಬೆಂಗಳೂರು: ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಮನೆಯ ಹೊರಾವರಣದಲ್ಲಿ ಕಳ್ಳತನವಾಗಿದ್ದು, ಇದನ್ನು ಸಿಸಿಟಿವಿಯಲ್ಲಿ ದೃಶ್ಯಗಳನ್ನು ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.


ಮನೆಯ ಹೊರಗೆ ನಿಲ್ಲಿಸಿದ್ದ ತಮ್ಮ ಚಾಲಕನ ಬೈಕ್ ನಿಂದ ಪೆಟ್ರೋಲ್ ಕದ್ದವರ ಬಗ್ಗೆ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.


 ನಿನ್ನೆ ಇಬ್ಬರು ಬೈಕ್ ನಲ್ಲಿ ಬಂದು ನಮ್ಮ ಡ್ರೈವರ್ ನ ಬೈಕ್ ನಿಂದ ಪೆಟ್ರೋಲ್ ಕಳ್ಳತನ ಮಾಡಿದ್ದಾರೆ. ಇಂತಹ ಖದೀಮರಿಗೆ ತಕ್ಕ ಪಾಠ ಕಲಿಸಬೇಕು. ಇದಕ್ಕಾಗಿ ಪೊಲೀಸರಿಗೆ ದೂರು ನೀಡುತ್ತಿದ್ದೇವೆ ಎಂದು ರಕ್ಷಿತಾ ಹೇಳಿದ್ದಾರೆ.


ಅಲ್ಲದೆ, ನಮ್ಮ ಯುವ ಜನಾಂಗ ಎತ್ತ ಸಾಗುತ್ತಿದೆ. ಪೆಟ್ರೋಲ್ ಕಳ್ಳತನ ಮಾಡುವುದು, ಮೊಬೈಲ್ ಕಳ್ಳತನ ಮಾಡುವುದು ಇಂತಹವರೆಲ್ಲಾ ಸಮಾಜಕ್ಕೆ ಕಪ್ಪು ಚುಕ್ಕೆಗಳು. ಇಂತಹವರಿಗೆ ತಕ್ಕ ಪಾಠ ಕಲಿಸಬೇಕು ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.

0 Comments

Post a Comment

Post a Comment (0)

Previous Post Next Post