ಕಾಸರಗೋಡು; ಜೈ ತುಳುನಾಡ್ (ರಿ) ಸಂಘಟನೆಯ ಕಾಸರಗೋಡು ಘಟಕದಿಂದ ಆಯೋಜಿಸಲಾಗಿದ್ದ ಆಟಿದ ಕೂಟ ಎಂಬ ಆನ್ಲೈನ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡ ಪ್ರಮುಖ ದೈವರಾಧನೆಯ ಚಿಂತಕ ಗೋಪಾಲಕೃಷ್ಣ ವಾಂತಿಚ್ಚಾಲು ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಭೂಮಿಗೆ ಅತಿವೃಷ್ಟಿ ಹಾಗೂ ಸಂಕಷ್ಟ ಸಮಯವೆಂದರೆ ಅದು ಆಟಿ ತಿಂಗಳು. ಈ ತಿಂಗಳಿನಲ್ಲಿ ತುಳುವರು ತಮ್ಮ ಜೀವನೋಪಾಯಕ್ಕಾಗಿ ಹಸಿವು ನೀಗಿಸಲು ನೈಸರ್ಗಿಕ ಆಹಾರಗಳನ್ನು ಸೇವಿಸಿ ಅವುಗಳಲ್ಲಿ ಔಷಧೀಯ ಗುಣಗಳನ್ನು ಕಂಡುಕೊಂಡಿದ್ದರು.
ಇಂದು ಮನುಷ್ಯ ಆಡಂಬರ ಹಾಗೂ ವೈಜ್ಞಾನಿಕ ಯುಗದಲ್ಲಿ ಜೀವನ ನಡೆಸುತ್ತಿರಬೇಕಾದರೆ, ಪ್ರಕೃತಿಯನ್ನು ನಾಶ ಮಾಡುತ್ತಾನೆ. ಅಂದು ಪ್ರಾಕೃತಿಕವಾಗಿಯೇ ನಾಡಿಗೆ ಬಂದ ಸಂಕಷ್ಟವನ್ನು ತಡೆಯುತಿದ್ದ ಬಗೆ ಹಾಗೂ ಆಟಿ ತಿಂಗಳಿನ ವಿಶೇಷ, ಹಲವಾರು ಆಚರಣಾ ಪದ್ದತಿಗಳ ಬಗ್ಗೆ ಬಹಳ ಸೊಗಸಾಗಿ ಉಪನ್ಯಾಸವನ್ನು ಕೊಟ್ಟು ಕೇಳುಗರಿಗೆ ವಿಷಯದ ಕುರಿತಾಗಿ ಅರಿಯುವಂತಾಯಿತು.
ಗೂಗಲ್ ಮೀಟ್ ವೇದಿಕೆ ಯಲ್ಲಿ ನಡೆದ ಕಾರ್ಯಕ್ರಮವು ಶ್ರೀಮತಿ ಲಕ್ಷೀ ಗೋಪಾಲ ಗುಂಡಿಬೈಲ್ ಅವರ ಆಟಿ ಕಲೆಂಜ ಪಾಡ್ದನದೊಂದಿಗೆ ಆರಂಭವಾಯಿತು.
ತುಳು ಸಾಹಿತಿ ಹಾಗೂ ಜೈತುಳುನಾಡ್ (ರಿ) ಕಾಸರಗೋಡು ಘಟಕದ ಸದಸ್ಯೆ ಕುಶಲಾಕ್ಷಿ ವಿ ಕುಲಾಲ್ ಅವರು ಆಟಿ ತಿಂಗಳ ತಿನಿಸುಗಳು ಹಾಗೂ ಕೆಲವೊಂದು ಔಷದೀಯ ಸಸ್ಯಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ನಂತರ ಕಾರ್ಯಕ್ರಮ ಅಧ್ಯಕ್ಷರಾಗಿ ಘಟಕದ ಅಧ್ಯಕ್ಷ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಅವರು ಮಾತನಾಡಿ ಆಟಿ ತಿಂಗಳ ತುಳುವರ ನಂಬಿಕೆ ಆಚಾರ ವಿಚಾರಗಳ ಕುರಿತಾಗಿ ಮಾಹಿತಿ ಹಂಚಿಕೊಂಡರು.
ನಂತರ ಪ್ರಶ್ನೋತ್ತರವಾಗಿ ಶೋತೃಗಳಿಂದ ಅನಿಸಿಕೆಗಳನ್ನು ಪಡೆಯಲಾಯಿತು. ದೇಶ ವಿದೇಶಗಳಿಂದ ಗಣ್ಯಾದಿ ಗಣ್ಯರು ಪಾಲ್ಗೊಂಡು ಕಾರ್ಯ ಕ್ರಮವನ್ನು ಯಶಸ್ವಿ ಗೊಳಿಸಿದರು.
ಕಾರ್ಯಕ್ರಮನ್ನು ಘಟಕದ ಸದಸ್ಯೆ ಹಾಗು ಯುವ ತುಳು ಸಾಹಿತಿ ರಾಜ ಶ್ರೀ ಟಿ ರೈ ಪೆರ್ಲ ಸೊಗಸಾಗಿ ಕಾರ್ಯಕ್ರಮನ್ನು ನಿರೂಪಿಸಿದರು.
ಘಟಕದ ಕಾರ್ಯದರ್ಶಿ ಕಾರ್ತಿಕ್ ಪೆರ್ಲ ಸ್ವಾಗತಿಸಿ ಘಟಕದ ಉಪಾಧ್ಯಕ್ಷೆ ವಿನೋದ ಪ್ರಸಾದ್ ರೈ ಕಾರಿಂಜೆ ವಂದಿಸಿದರು.
Post a Comment