ಉಡುಪಿ: ಮಲ್ಪೆ ಬೀಚ್‌ನಲ್ಲಿ ಈಜುವಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಡಗು ಜಿಲ್ಲೆಯ ಅಮ್ಮತ್ತಿಯ ಯು.ಜೆ.ದೇಚಮ್ಮ (20) ವರ್ಷದ ಯುವತಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ದೇಚಮ್ಮ ಜತೆಗೆ ಸಮುದ್ರಕ್ಕಿಳಿದು ಅಪಾಯಕ್ಕೆ ಸಿಲುಕಿದ್ದ ಎಂ.ಯು.ಶೈನಿ, ನವ್ಯ ಮಂದಣ್ಣ ಹಾಗೂ ನಿಖಿಲ್ ಗೌಡ ಎಂಬುವರನ್ನು ಮೀನುಗಾರರು ರಕ್ಷಿಸಿದ್ದಾರೆ. ನಿಖಿಲ್ ಗೌಡ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರಿನ ವಿಜಯಪುರದ ಎಂ.ಯು.ಶೈನಿ ಸ್ನೇಹಿತರಾದ ನವ್ಯ ಮಂದಣ್ಣ, ನಿಖಿಲ್ ಗೌಡ, ದೇಚಮ್ಮ ಅವರ ಜೊತೆಗೆ ಶನಿವಾರ ಮಲ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದರು.
ಇಲ್ಲಿನ ಬ್ಲೂಬೇ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಸ್ನೇಹಿತರು ಭಾನುವಾರ ಈಜಲು ಸಮುದ್ರಕ್ಕಿಳಿದಾಗ ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ.
ಸ್ಥಳೀಯರು ಹಾಗೂ ಬೀಚ್‌ನ ಸಿಬ್ಬಂದಿ ಸಮುದ್ರದಾಳಕ್ಕೆ ಹೋಗದಂತೆ ಎಚ್ಚರಿಕೆ ನೀಡಿದರೂ ಕಡೆಗಣಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಮಲ್ಪೆ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Post a Comment