ಧಾರಾವಾಡ; ಮಂತ್ರ ಘೋಷ ಇಲ್ಲ, ಹಾರ ಬದಲಾಯಿಸಲೂ ಇಲ್ಲ. ಯಾವ ಸಂಪ್ರದಾಯವೂ ಇಲ್ಲದೆಯೇ ಮಾದರಿ ವಿವಾಹವೊಂದು ಬುಧವಾರ ರಾತ್ರಿ ವಾಲ್ಮೀಕಿ ಸಭಾಂಗಣದಲ್ಲಿ ನಡೆಯಿತು.
ಅಖಿಲ ಭಾರತ ಯುವಜನ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಮೈಸೂರಿನ ಅನಿಲ್ ಕುಮಾರ್ ಮತ್ತು ಅಖಿಲ ಭಾರತ ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ, ಆಶಾ ಸಂಘಟನೆಯಲ್ಲೂ ಇರುವ ದಾವಣಗೆರೆ ಹೊಂಡದ ಸರ್ಕಲ್‌ನ ಭಾರತಿ ಅವರು ಈ ರೀತಿಯ ಮದುವೆಯಾದರು.
ಎಲ್ಲ ಸಂಪ್ರದಾಯಗಳನ್ನು ಮೀರಿ ಪ್ರಜಾಪ್ರಭುತ್ವದ ಆಶಯದಂತೆ ಮದುವೆಯಾಗುವುದೇ ಪ್ರಜಾಪ್ರಭುತ್ವದ ದೇಶದ ಲಕ್ಷಣ ಆಗಬೇಕು. ಅದರಂತೆ ಪರಸ್ಪರ ಗೌರವಿಸಿಕೊಂಡು, ಪರಸ್ಪರ ಪ್ರೀತಿಯಿಂದ ಮದುವೆಯಾಗಿದ್ದಾರೆ ಎಂದು ವಿವಿಧ ಸಂಘಟನೆಗಳ ಹಿರಿಯರು ಹಾರೈಸಿದರು.
ಬೆಳಿಗ್ಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಕೊಂಡು, ಸಂಜೆ ವಿವಾಹ ಸಂತೋಷಕೂಟ ನಡೆಯಿತು. ಬಂದವರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment