ನಂತೂರು: ಶ್ರೀ ಭಾರತಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ರೇಂಜರ್ಸ್ ಘಟಕಗಳ ವತಿಯಿಂದ “ವನ ಮಹೋತ್ಸವ”ವನ್ನು ಮಂಗಳೂರಿನ ನಂತೂರಿನಲ್ಲಿರುವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅರಣ್ಯ ಇಲಾಖೆ ಹಾಗೂ ರೋಟರಿ ಕ್ಲಬ್ ಮಂಗಳೂರು ಹಿಲ್ಸೈಡ್ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ವಲಯಾಧಿಕಾರಿ ರೊ.ಶ್ರೀಧರ್ ರವರು ಹಾಗೂ ರೋಟರಿ ಅಧ್ಯಕ್ಷ ಪ್ರವೀಣಚಂದ್ರ ಶರ್ಮರು ಕಾರ್ಯಕ್ರಮವನ್ನು ಗಿಡಗಳನ್ನು ನೆಡುವ ಮೂಲಕ ಉದ್ಘಾಟಿಸಿದರು.
ಸ್ವಾಗತಿಸಿದ ಪ್ರಾಂಶಪಾಲರಾದ ಪ್ರೊ.ಜೀವನದಾಸರು ಪರಿಸರ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ತಿಳಿಸಿದರು.
ಕಾರ್ಯದರ್ಶಿ ರೊ.ಮನೀಶ್ ರಾವ್, ವಲಯ ಸೇನಾನಿ ರೊ.ಸತೀಶ್ ಬಿಕೆ, ರೊ.ಸುರೇಶ ಕಿಣಿ, ರೊ.ರಂಗನಾಥ ಕಿಣಿ, ರೊ.ಡಾ।ಅಬ್ರಹಾಂ ಝಕಾರಿಯಾಸ್, ರೊ.ಶ್ಯಾಮಲಾಲ್ ವೈ, ರೊ.ವಿಷ್ಣುದಾಸ ಶೇವಗೂರ್, ರೊ.ಅಶೋಕ ರಾವ್, ರೊ.ಎಸ್.ಸಿ.ವರ್ಮ ಹಾಗೂ ಶ್ರೀಮತಿ ವೀಣಾ ಬಿಕೆಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸಿದರು. ಉಪ ಪ್ರಾಂಶುಪಾಲರಾದ ಪ್ರೊ.ಗಂಗಾರತ್ನ ಮುಗುಳಿಯವರು ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment