ಮಂಗಳೂರು: ಗೃಹರಕ್ಷಕ ದಳದ ಪಣಂಬೂರು ಘಟಕದ ವತಿಯಿಂದ ಇಂದು (ಜು.31) ಬೆಳಗ್ಗೆ 8.00 ಗಂಟೆಗೆ ಶ್ರೀ ನಂದನೇಶ್ವರ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆಯನ್ನು ವಹಿಸಿದರು.
ಡಿಜಿಪಿಯವರ ಆದೇಶದಂತೆ ರಾಜ್ಯಾದ್ಯಂತ ಗೃಹರಕ್ಷಕರು “ಗಿಡ ಬೆಳೆಸಿ, ಪರಿಸರ ಉಳಿಸಿ” ಅಭಿಯಾನ ಆರಂಭಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ ಈ ವರ್ಷದಲ್ಲಿ ಸುಮಾರು 1000 ಸಸಿಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ವರೆಗೆ ಸುಮಾರು 800 ಗಿಡಗಳನ್ನು ನೆಡಲಾಗಿದೆ. ಗಿಡ ನೆಟ್ಟು ಹಸಿರು ಬೆಳೆಸಿದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಸಿಗಳನ್ನು ನೆಡುವ ಕಾರ್ಯ ಯೋಜನೆ ಸಿದ್ದಪಡಿಸಲಾಗಿದೆ ಎಂದು ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.
ದೇವಸ್ಥಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಅನಂತ ಐತಾಳ್ ಅವರು ಮಾತನಾಡಿ, ದೇವಸ್ಥಾನದ ಸುತ್ತ ಮುತ್ತ ಬಿಲ್ವ ಪತ್ರೆ, ಸಂಪಿಗೆ, ಮಾವು ಮುಂತಾದ ಗಿಡ ನೆಟ್ಟು ಬೆಳೆಸಿದಲ್ಲಿ ದೇವಸ್ಥಾನಕ್ಕೆ ದೈವಿಕವಾದ ಕಳೆ ಬರುತ್ತದೆ. ಗೃಹರಕ್ಷಕರ ವನಮಹೋತ್ಸವ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಅವರು ನುಡಿದರು. ಸುಮಾರು 25 ಗಿಡಗಳನ್ನು ದೇವಸ್ಥಾನದ ಸುತ್ತ ಮುತ್ತ ನೆಡಲಾಯಿತು.
ಈ ಸಂದರ್ಭದಲ್ಲಿ ಗೃಹರಕ್ಷಕರಾದ ನಿಶಾಲ್ ಅವರು ಸ್ವಾಗತ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ನಂದನೇಶ್ವರ ದೇವಸ್ಥಾನದ ಮಹಿಳಾ ಘಟಕದ ಟ್ರಸ್ಟಿ ಸುಮತಿ, ದೇವಸ್ಥಾನದ ಟ್ರಸ್ಟಿ ವಾಸುದೇವ, ಪಣಂಬೂರು ಘಟಕದ ನಿವೃತ್ತ ಘಟಕಾಧಿಕಾರಿ ಹರೀಶ್ ಆಚಾರ್ಯ, ಪ್ರಭಾರ ಘಟಕಾಧಿಕಾರಿ ಶಿವಪ್ಪ ನಾಯ್ಕ್ ಮತ್ತು ಪಣಂಬೂರು ಘಟಕದ ಎಲ್ಲಾ ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗೃಹರಕ್ಷಕರಾದ ಮಹೇಶ್ ಮತ್ತು ಗಂಗಾಧರ್ ಎಸ್.ವಿ ಇವರು ವಂದನಾರ್ಪಣೆ ಸಲ್ಲಿಸಿದರು.
إرسال تعليق