ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಜಕಾರಣಿಗಳು ಮನೆ ಒಡೆಯುವುದರಲ್ಲಿ ನಿಷ್ಣಾತರು?

ರಾಜಕಾರಣಿಗಳು ಮನೆ ಒಡೆಯುವುದರಲ್ಲಿ ನಿಷ್ಣಾತರು?


ನಮ್ಮ ರಾಜಕಾರಣಿಗಳ ಬತ್ತಳಿಕೆಯಲ್ಲಿ  ತಮ್ಮ ರಾಜಕೀಯ ಎದುರಾಳಿಯನ್ನು ಮಣಿಸಲು ಹಲವಾರು ಅಸ್ತ್ರಗಳಿವೆ. ಅದರಲ್ಲಿ ಇತ್ತೀಚಿನ ಅಸ್ತ್ರ ಮನೆ/ಮನ ಒಡೆಯುವ ಅಸ್ತ್ರ. ಇದನ್ನು ಇಂದು ಎಲ್ಲಾ ಪಕ್ಷದವರು ಬಳಸುತ್ತಿದ್ದಾರೆ. ಇದು ಇದು ಎಷ್ಟರ ಮಟ್ಟಿಗೆ ಯಶಸ್ಸೋ  ಗೊತ್ತಿಲ್ಲ..ಆದರೂ ಪಕ್ಷಗಳಲ್ಲಿ ತಲ್ಲಣ ಮೂಡಿಸುವುದಂತೂ ಸತ್ಯ.ಇದನ್ನೇ ಒಡೆದು ಆಳುವ ನೀತಿ ಅಂತಹ ರಾಜಕೀಯ ಇತಿಹಾಸದಲ್ಲಿ ಓದಿದ್ದೇವೆ. ಅಷ್ಟೇ.


ಈ ಅಸ್ತ್ರ ಹೇಗೆ ನಾಜೂಕಾಗಿ ಬಳಸುತ್ತಾರೆ ನೋಡಿ ಮೋದಿಯನ್ನು ಮಣಿಸಬೇಕೆನ್ನುವಾಗ ವಿರೇೂಧಿಗಳು ಅಡ್ವಾಣಿಯವರನ್ನು ಸಿಕ್ಕಾ ಪಟ್ಟೆ ಹೊಗಳುವುದು.! ಎಲ್ಲೊ ಬಿಜೆಪಿಯವರು ಯಡಿಯೂರಪ್ಪ ನವರನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಅನ್ನುವ ಸಂದರ್ಭದಲ್ಲಿ  ಬಿಜೆಪಿ ವಿರೇೂಧಿಗಳು ಯಡಿಯೂರಪ್ಪ  ಸಿಕ್ಕಾ ಪಟ್ಟೆ ಹೊಗಳುವುದು. ಅದೇ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ vs ಡಿ.ಕೆ.ಶಿ.ನಡುವೆ ಜಟಾಪಟಿ ನಡೆಯುತ್ತಿದೆ ಅನ್ನುವಾಗ ಬಿಜೆಪಿಯ ಶ್ರೀರಾಮುಲು ಅಂತವರು ಸಿದ್ದರಾಮಯ್ಯನವರ ಪರವಾಗಿ ಅಹಿಂದ ಪರ ಬ್ಯಾಟಿಂಗ್ ಮಾಡುವುದು.


ಇದನ್ನೆಲ್ಲಾ ನೇೂಡುವಾಗ ನಿಜಕ್ಕೂ ಇವರು ಬ್ಯಾಟಿಂಗ್ ಮಾಡುವವರ ಪರ ಇದ್ದಾರಾ ಕೇಳಿದರೆ; ಖಂಡಿತವಾಗಿಯೂ ಇಲ್ಲ. ಒಟ್ಟಾರೆ ರಾಜಕೀಯ ಎದುರಾಳಿಯನ್ನು ಸದೇ ಬಡಿಯುವುದೇ ಮೂಲ ಉದ್ದೇಶ. ನಮ್ಮ ರಾಜಕಾರಣಿಗಳು ಸಮಯ ಸಂದರ್ಭದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವುದರಲ್ಲಿ ನಿಷ್ಣಾತರು ಅನ್ನುವುದು ಕಟ್ಟು ಸತ್ಯ.ಅಲ್ವೆ? ನೀವೇನು ಅನ್ನುವುತ್ತೀರಿ?

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post