ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಣ್ಣಿನ ಸಂಪ್ರದಾಯವನ್ನು ಉಳಿಸುವ ಕೆಲಸ ನಡೆಯಲಿ :ಶಾಸಕ ಡಾ. ಭರತ್ ಶೆಟ್ಟಿ

ಮಣ್ಣಿನ ಸಂಪ್ರದಾಯವನ್ನು ಉಳಿಸುವ ಕೆಲಸ ನಡೆಯಲಿ :ಶಾಸಕ ಡಾ. ಭರತ್ ಶೆಟ್ಟಿ


 

ಸುರತ್ಕಲ್: ನವದುರ್ಗಾ ಫ್ರೆಂಡ್ಸ್ ಸರ್ಕಲ್ ರಥಬೀದಿ ಸುರತ್ಕಲ್ ಮತ್ತು ತ್ರೈರೂಪಿಣಿ ಮಹಿಳಾ ಮಂಡಳಿ ಸುರತ್ಕಲ್ ಜಂಟಿ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ನಡೆಯಿತು.


ಶ್ರೀದೇವಿ ಸನ್ನಿಧಿಯಲ್ಲಿ ನೇಜಿಯನ್ನಿಟ್ಟು ಕ್ಷೇತ್ರದ ಅರ್ಚಕರು  ಪ್ರಾರ್ಥಿಸುವುದರೊಂದಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ.ಭರತ್ ಶೆಟ್ಟಿಯವರು ಬಾಕಿಮಾರು ಗದ್ದೆಗೆ ದೇವರ ಪ್ರಸಾದ ಹಾಕಿ ನೇಜಿ ನೆಡುವುದರ ಮೂಲಕ ಚಾಲನೆ ನೀಡಿದರು.


ಈ ಸಂದರ್ಭ ಮಾತನಾಡಿದ ಅವರು ನಮ್ಮ ಮಣ್ಣಿನ ಸಂಪ್ರದಾಯವನ್ನು ಉಳಿಸುವ ಕೆಲಸವನ್ನು ಸ್ಥಳೀಯರು ಮತ್ತು ಈ ಪ್ರದೇಶದ ದೇವಳಗಳ ಭಕ್ತರು ಮಾಡುತ್ತಿದ್ದು ಇದು ಪ್ರಶಂಸನೀಯ. ಗದ್ದೆಯನ್ನು ಉಳಿಸಿಕೊಂಡು ಮುಂದೆಯೂ ನಿರಂತರವಾಗಿ ಈ ಕಾಯಕ ಇಲ್ಲಿ ಮಾತ್ರವಲ್ಲದೆ ಎಲ್ಲೆಡೆಯೂ ನಡೆಯಬೇಕೆಂದರು.


ಈ ಸಂದರ್ಭ ನವದುರ್ಗಾ ಫ್ರೆಂಡ್ಸ್ ಸರ್ಕಲ್ ನ ಗೌರವಾಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ, ಕ್ಷೇತ್ರದ  ಆಡಳಿತ ಮಂಡಳಿ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿಗಾರ್, ಕೇಶವ ಪಿ. ಶೆಟ್ಟಿಗಾರ್,ಗೌರವ ಸಲಹೆಗಾರರಾದ ಮಹೇಶ್ ಮೂರ್ತಿ, ಮ.ನ.ಪಾ ಸದಸ್ಯರುಗಳಾದ ಶ್ರೀಮತಿ ಶೋಭಾ ರಾಜೇಶ್, ಶ್ವೇತಾ ಪೂಜಾರಿ, ಶ್ರೀಮತಿ ಸರಿತಾ ಶಶಿಧರ್, ನಯನಾ ಕೋಟ್ಯಾನ್, ಲೋಕೇಶ್ ಬೊಳ್ಳಾಜೆ, ಬಿಜೆಪಿ ಮಂಗಳೂರು ಉತ್ತರ ಮಂಡಲದ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ,  ತ್ರೈರೂಪಿಣಿ ಮಹಿಳಾ ಮಂಡಳಿ ಅಧ್ಯಕ್ಷರಾದ ಪುಷ್ಪ ಶೆಟ್ಟಿಗಾರ್, ಸತೀಶ್ ಶೆಟ್ಟಿ ಬಾಳಿಕೆ, ಕೃಷಿ ಚಟುವಟಿಕೆಯ ಉಸ್ತುವಾರಿ ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ಸುರೇಶ್ ಪಿ. ಶೆಟ್ಟಿಗಾರ್ ಹಾಗೂ ಜಂಟಿ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.


ಕೃಷಿ ಕಾರ್ಯದ ಹಿರಿಯ ಅನುಭವಿ ಗಳಾದ ಭವಾನಿ, ದಮಯಂತಿ, ಪ್ರೇಮ ಮತ್ತಿತರರ ಮಾರ್ಗದರ್ಶನದಲ್ಲಿ ಸಂಸ್ಥೆಯ ಸದಸ್ಯರುಗಳಿಂದ ನೇಜಿ ನೆಡುವ ಕಾರ್ಯವು ಸಂಪನ್ನಗೊಂಡಿತು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post