ಪುತ್ತೂರು: ನಿರಂತರ ಕಲಿಕೆ ಮತ್ತು ತರಬೇತಿ ಒಂದೇ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಇರುವ ಮಂತ್ರ ಎಂದು ಸಿಎ ಗಾಯತ್ರಿ ಬೆಳ್ತಂಗಡಿ ಹೇಳಿದರು.
ಅವರು ವಿವೇಕಾನಂದ ಕಾಲೇಜು ವಾಣಿಜ್ಯ ವಿಭಾಗ, ವಾಣಿಜ್ಯ ಸಂಘ, ಐಕ್ಯೂಎಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ" ಬ್ರೀಡ್ಜಿoಗ್ ದ ಸ್ಕಿಲ್ ಗ್ಯಾಪ್ " ಎಂಬ ವಿಷಯದ ಬಗ್ಗೆ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಆದಿತ್ಯವಾರ ಮಾತನಾಡಿದರು.
ಇತ್ತೀಚಿಗೆ ಎಲ್ಲಾ ವಿದ್ಯಾರ್ಥಿಗಳಲ್ಲಿ ಮತ್ತು ಉದ್ಯೋಗಿಗಳಲ್ಲಿ ಕಾಡುತ್ತಿರುವ ಒಂದು ಸಮಸ್ಯೆ ಎಂದರೆ ಕೌಶಲ್ಯದ ಕೊರತೆ, ಕೌಶಲ್ಯಗಳಲ್ಲಿ ಕಠಿಣ ಕೌಶಲ್ಯ ಮತ್ತು ಮೃದು ಕೌಶಲ್ಯ ಎಂಬ ಎರಡು ವಿಧಗಳಿವೆ, ಕಠಿಣ ಕೌಶಲ್ಯಗಳನ್ನು ಕಲಿಕೆ ಮತ್ತು ತರಬೇತಿಗಳಿಂದ ಪಡೆಯಬಹುದು, ಆದರೆ ಮೃದು ಕೌಶಲ್ಯಗಳನ್ನು ಕಲಿಯಲು ನಮ್ಮೊಳಗೆ ಇರುವ ಶಕ್ತಿಯನ್ನು ಬಳಸಿಕೊಂಡು ವೃದ್ಧಿಸಬೇಕು, ಇದಕ್ಕಾಗಿ ಜೀವನದಲ್ಲಿ ಸಾಧಿಸಬೇಕೆಂಬ ದೃಢವಿಶ್ವಾಸ ನಮ್ಮಲ್ಲಿ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಜಿ. ಭಟ್, ಕೋವಿಡ್ ಎಂಬ ಮಹಾಮಾರಿ ಜಗತ್ತನ್ನೇ ಸ್ತಬ್ಧಗೊಳಿಸಿದರೂ, ವಿದ್ಯಾರ್ಥಿಗಳು ದೃತಿಗೆಡದೆ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಕಲಿಕೆಯನ್ನು ಮುಂದುವರಿಸುವುದರೊಂದಿಗೆ, ಕೌಶಲ್ಯವನ್ನು ವೃದ್ಧಿಸಬೇಕು ಎಂದು ಪ್ರೋತ್ಸಾಹದ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಕಾಲೇಜಿನ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಾಣಿಜ್ಯ ಸಂಘದ ಸಂಯೋಜಕ ಗೌತಮ್ ಪೈ ಕಾರ್ಯಕ್ರಮವನ್ನು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment