ತಮಿಳುನಾಡು: ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಸಹೋದರಿಯನ್ನು ಅಣ್ಣನೊಬ್ಬ ಕೊಲೆ ಮಾಡಿರುವ ಘಟನೆ ತೂತುಕುಡಿಯ ವಾಸವಪ್ಪಪುರಂ ಗ್ರಾಮದಲ್ಲಿ ನಡೆದಿದೆ.
ಆರೋಪಿ ಅಣ್ಣನನ್ನು ಬಂಧಿಸಲಾಗಿದ್ದು, 17 ವರ್ಷದ ಕವಿತಾ ಹಾಗೂ 20 ವರ್ಷದ ಮಲೈರಾಜ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಕಳೆದ ಕೆಲ ತಿಂಗಳಿಂದ ಕವಿತಾ ಸಹೋದರನ ಮೊಬೈಲ್ ನಲ್ಲಿ ಫೇಸ್ಬುಕ್, ವಾಟ್ಸ್‌ಪ್ ಬಳಕೆ ಮಾಡುತ್ತಿದ್ದಳು. ಇದರ ಜೊತೆಗೆ ರಾತ್ರಿಯಿಡೀ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದಳು.
ಸಹೋದರಿಯ ಈ ವರ್ತನೆಯಿಂದ ಸಹೋದರ ಮಲೈರಾಜ ಸಿಟ್ಟುಗೊಂಡು, ಮೊಬೈಲ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದ.
ಅಣ್ಣನ ಮಾತನ್ನು ಕೇಳದ ಕವಿತಾ ತನ್ನ ಕೆಲಸ ಮುಂದುವರೆಸಿದ್ದಳು. ಸಂಜೆ ಕೂಡ ಮಲೈರಾಜ್ ಸಹೋದರಿಗೆ ಎಚ್ಚರಿಕೆ ನೀಡಿದ್ದು, ಈ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಕೋಪಗೊಂಡ ಮಲೈರಾಜ ಕುಡುಗೋಲಿನಿಂದ ಸಹೋದರಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ಪರಿಣಾಮ ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನಾ ಸ್ಥಳಕ್ಕೆ ಮುರಪ್ಪನಾಡು ಪೊಲೀಸರು ಬಂದು ಮೃತದೇಹ ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮಲೈರಾಜನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment