ಬೀದರ್: ಯುಪಿಎಸ್‍ಸಿ ಪರೀಕ್ಷೆಯಲ್ಲಿ 511ನೇ ರ್‍ಯಾಂಕ್ ಗಳಿಸಿದ ಇಲ್ಲಿಯ ಗುರುನಾನಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಖಮರುದ್ದಿನ್ ಖಾನ್ ಎಂ.ಡಿ. ಫಿರೋಜ್‍ಖಾನ್ ಅವರನ್ನು ಶಾಲೆಯಲ್ಲಿ ಗುರುವಾರ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ನಾನು ಕೂಡ ಸಾಮಾನ್ಯ ವಿದ್ಯಾರ್ಥಿಗಳಂತೆ ಇದ್ದೆ. ಗುರುನಾನಕ ಶಾಲೆ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಅರಿವು ಮೂಡಿಸಿ, ಆತ್ಮವಿಶ್ವಾಸ ತುಂಬಿದ್ದರಿಂದಲೇ ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಎಂ.ಡಿ. ಖಮರುದ್ದಿನ್ ಹೇಳಿದರು.
ಗುರುನಾನಕ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಅನುಭವಿ ಶಿಕ್ಷಕರು ಇದ್ದಾರೆ ಎಂದು ತಿಳಿಸಿದರು.
ಪವನಪ್ರಿಯಾ, ಮುಖ್ಯ ಶಿಕ್ಷಕರಾದ ಎನ್. ರಾಜು, ಅಮಜದ್ ಅಲಿ, ಶಿಕ್ಷಕರಾದ ಮನೋಹರ ಮುಳೆ, ಆನಂದ, ಆಶಾ ಉಪ್ಪಿನ್ ಇದ್ದರು.
Post a Comment