ಎರ್ಮಾಳು: ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಿವೃತ್ತ ಪ.ಪೂ. ಪ್ರಾಧ್ಯಾಪಕ, ಸಾಹಿತಿ, ಚಿಂತಕ, ಪ್ರವಚನಕಾರ ವೈ. ರಾಮಕೃಷ್ಣ ರಾವ್ ವಿರಚಿತ ಎರ್ಮಾಳು ಶ್ರೀ ಜನಾರ್ದನ ದೇವರ ಸುಪ್ರಭಾತದ ಪುಸ್ತಕ ಹಾಗೂ ಅಡಕ ಮುದ್ರಿಕೆಯನ್ನು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾದೀಶ ಶ್ರಿಪಾದರು ಬಿಡುಗಡೆಗೊಳಿಸಿದರು. ಕಿರಿಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾರಾಜ ಶ್ರೀಪಾದರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಮಕೃಷ್ಣ ರಾಯರ ಕವನ ಸಂಕಲನ "ಹೊಂಬೆಳಕು" ಕೃತಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೆಂದ್ರ ಅಡಿಗ ಅವರು ಬಿಡುಗಡೆಗೊಳಿಸಿದರು.
ದೇವಳದ ಅನುವಂಶಿಕ ಮೊಕ್ತೇಸರ ಎರ್ಮಾಳು ಬೀಡು ವೈ. ಅಶೋಕರಾಜ್ ಅವರು ಅಧ್ಯಕ್ಷತೆ ವಹಿಸಿದ್ದರು. ದೇವಳದ ತಂತ್ರಿಗಳಾದ ವೇ.ಮೂ. ರಾಧಾಕೃಷ್ಣ ಉಪಾಧ್ಯಾಯ, ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ, ಸಾಹಿತಿ, ಕವಿ ಡಾ.ಜನಾರ್ದನ ಭಟ್, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ, ಉಡುಪಿ ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಶೀಲಾ ಕೆ.ಶೆಟ್ಟಿ, ಸುಪ್ರಭಾತಕ್ಕೆ ಕಂಠದಾನ ಮಾಡಿದ ಪ್ರಸಿದ್ಧ ಹಿನ್ನೆಲೆ ಗಾಯಕ ರಮೇಶ್ಚಂದ್ರ, ಬೆಂಗಳೂರಿನ ತುಳುವೆರೆಂಕುಲು ಸಂಸ್ಥೆಯ ಅಧ್ಯಕ್ಷ ವೈ.ಜಯಂತರಾವ್, ಪುಚ್ಚೊಟ್ಟು ಬೀಡು ಚಂದ್ರಹಾಸ ಎಲ್.ಶೆಟ್ಟಿ, ವ್ಯಾಸ ಮೋಹನ ಮುಂತಾದವರು ಉಪಸ್ಥಿತರಿದ್ದರು.
ರಾಮಕೃಷ್ಣ ರಾಯರು ಪ್ರಸ್ತಾವಿಸಿ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್. ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಲಲಿತಾ ಆರ್.ರಾವ್ ವಂದಿಸಿದರು. ದೇವಳದ ಪ್ರಬಂಧಕ ಸತೀಶ ರಾವ್, ಸಂತೋಷ ಜೆ.ಶೆಟ್ಟಿ ಸಹಕರಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment