ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊರೋನಾ ನಿರ್ವಹಣೆಯಲ್ಲಿ ಹೊಣೆಯರಿತ ನಡವಳಿಕೆ ಮುಖ್ಯ: ಡಾ. ಶ್ರೀಪ್ರಸಾದ್ ಹೆಚ್

ಕೊರೋನಾ ನಿರ್ವಹಣೆಯಲ್ಲಿ ಹೊಣೆಯರಿತ ನಡವಳಿಕೆ ಮುಖ್ಯ: ಡಾ. ಶ್ರೀಪ್ರಸಾದ್ ಹೆಚ್


ಉಜಿರೆ: ಭಾರತ ದೇಶ ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿದ್ದು, ಜನಸಂಖ್ಯೆಯನ್ನು ಸಂಪನ್ಮೂಲ ಎಂದು ಪರಿಗಣಿಸಲಾಗಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕೌಶಲ ಮತ್ತು ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಆತಂಕವನ್ನು ಎದುರಿಸುತ್ತಿದ್ದೇವೆ. ಆದುದರಿಂದ ಕೊರೋನಾ ಮೂರನೆ ಅಲೆಯು ಬರದಂತೆ ಮುನ್ನೆಚ್ಚರಿಕೆ  ಕ್ರಮಗಳಿಗೆ ಹಾಗೂ ಜನಸಾಮಾನ್ಯರ ಹೊಣೆಯರಿತ ನಡವಳಿಕೆಗಳಿಗೆ ಒತ್ತು ನೀಡಬೇಕು ಎಂದು ಧಾರವಾಡದ ಕೇಂದ್ರ ಮಾನವ ಸಂಪನ್ಮೂಲ ಆರೋಗ್ಯ ಸಚಿವಾಲಯ ಪ್ರವರ್ತಿತ ಜನಸಂಖ್ಯಾ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕರಾದ ಡಾ.ಶ್ರೀಪ್ರಸಾದ್. ಹೆಚ್ ಅವರು ಕರೆ ನೀಡಿದರು.


ಅವರು ಉಜಿರೆಯ ಶ್ರೀ.ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗವು “ವಿಶ್ವ ಜನಸಂಖ್ಯಾ ದಿನಾಚರಣೆ” ಅಂಗವಾಗಿ ಆಯೋಜಿಸಿದ ಆನ್ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎ. ಜಯ ಕುಮಾರ ಶೆಟ್ಟಿ ಅವರು ಮಾತನಾಡಿ, ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ಮಾನವನ ಜೀವನ ಶೈಲಿ ಜೀವಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಜಾಗತಿಕ ಸಮಸ್ಯೆಗಳು ಆಂತರಿಕವಾಗಿ ಜನಸಂಖ್ಯೆಯ ಹೆಚ್ಚಳದೊಂದಿಗೆ ತಳಕು ಹಾಕಿಕೊಂಡಿವೆ. ಜನಸಂಖ್ಯೆ ಏರಿದಂತೆ ಜಾಗತಿಕ ಅಸಮಾನತೆಯೂ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟರು.


ಪ್ರಾಧ್ಯಾಪಕ ಅಭಿನಂದನ್ ಹಾಗೂ ಡಾ.ನಾಗರಾಜ್ ಪೂಜಾರಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಡಾ.ಗಣರಾಜ್ ಸ್ವಾಗತಿಸಿ ಡಾ.ಮಹೇಶ್ ಕುಮಾರ್ ಶೆಟ್ಟಿ ವಂದಿಸಿದರು.


Key Words: World Population Day, SDM College Ujire,  ಎಸ್‌ಡಿಎಂ ಕಾಲೇಜು, ವಿಶ್ವ ಜನಸಂಖ್ಯಾ ದಿನಾಚರಣೆ

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post