ವಿವಿ ಕಾಲೇಜು: ಸಂಶೋಧನಾ ವಿಧಾನ ಕುರಿತ ಎಫ್‌ಡಿಪಿಯಲ್ಲಿ ಡಾ. ನಿಯಾಜ್ ಪಣಕಜೆ
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗ, ವಾಣಿಜ್ಯ ಸಂಘ ಮತ್ತು ಕನ್ಸ್ಯೂಮರ್ ಕ್ಲಬ್ ವತಿಯಿಂದ ಇತ್ತೀಚೆಗೆ ಸಂಶೋಧನಾ ವಿಧಾನದ (ರಿಸರ್ಚ್ ಡಿಸೈನ್ ಆಂಡ್ ಅಪ್ಲಿಕೇಶನ್ ಆಫ್ ರಿಸರ್ಚ್ ಟೂಲ್ಸ್) ಕುರಿತು ವೆಬಿನಾರ್‌ವೊಂದನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ನಿರ್ವಹಣೆ ಮತ್ತು ವಾಣಿಜ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ನಿಯಾಜ್ ಪಣಕಜೆ, ವ್ಯವಸ್ಥಿತ ಸಂಶೋಧನಾ ವಿನ್ಯಾಸ ಸವಾಲಿನ ಕೆಲಸ. ಸೂಕ್ತ ಸಂಶೋಧನಾ ವಿಧಾನವಿಲ್ಲದಿದ್ದರೆ ನಮ್ಮ ಸಂಶೋಧನೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ವಿವರಣಾತ್ಮಕ ಸಂಶೋಧನೆಗಿಂತ ವಿಶ್ಲೇಷಣಾತ್ಮಕ ಸಂಶೋಧನೆಯ ಮೌಲ್ಯ ಹೆಚ್ಚು, ಎಂದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ಯುವ ಸಂಶೋಧಕ ಡಾ. ನಿಯಾಜ್ ಪಣಕಜೆಯವರ ಸಾಧನೆ ಇತರರಿಗೆ ಸ್ಫೂರ್ತಿ ಎಂದರು.
ವಿಭಾಗದ ಉಪನ್ಯಾಸಕರಾದ ಡಾ. ಸೌಮ್ಯ ಪ್ರವೀಣ್ ಕಾರ್ಯಕ್ರಮ ನಿರೂಪಿಸಿ, ಕಾರ್ತಿಕ್ ಅತಿಥಿಗಳನ್ನು ಸ್ವಾಗತಿಸಿದರು. ಪ್ರಜ್ಞಾ ಅತಿಥಿಗಳನ್ನು ಪರಿಚಯಿಸಿದರೆ, ವಂದನಾ ಧನ್ಯವಾದ ಸಮರ್ಪಿಸಿದರು. ವಿಭಾಗದ ಮುಖ್ಯಸ್ಥ ಡಾ. ಉದಯ ಕುಮಾರ್ ಎಂ.ಎ, ವಾಣಿಜ್ಯ ಸಂಘ ಮತ್ತು ಕನ್ಸ್ಯೂಮರ್ ಕ್ಲಬ್ ಉಪಾಧ್ಯಕ್ಷ ಡಾ. ಎ. ಸಿದ್ಧಿಕ್, ವಿಭಾಗದ ಉಪನ್ಯಾಸಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳೂ ಸೇರಿದಂತೆ 200 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment