ನಮ್ಮ ದೇಶ ಇಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಬೀಗುತ್ತಿರುವ ಈ ಸಂದರ್ಭದಲ್ಲಿ ನಮ್ಮ ಭಾರತಮಾತೆ ಎದುರಿಸಿದ ಕಠಿಣ ಪರಿಸ್ಥಿತಿಗಳ ಹೆಜ್ಜೆ ಗುರುತುಗಳು ನಮ್ಮ ಹೃದಯ ಕಲಕದೆ ಬಿಡದು.
ನಾವು ಭಾರತೀಯರು ಶಾಂತಿಪ್ರಿಯರು. ಯಾವುದೇ ದೇಶದ ಗಡಿ ದಾಟಿ ಹೋಗುವವರಲ್ಲ... ಆದರೆ ಗಡಿ ದಾಟಿ ಬಂದವರಿಗೆ ತಕ್ಕ ಪಾಠ ಕಲಿಸದೇ ಬಿಡುವವರೂ ಅಲ್ಲ.
ಸರಿಸುಮಾರು 22ವರ್ಷಗಳ ಹಿಂದೆ 1999ರ ಜೂನ್-ಜುಲೈಯಲ್ಲಿ ನಮ್ಮ ನೆರೆಯ ಪಾಕಿಸ್ಥಾನ ಗಡಿ ಉಲ್ಲಂಘಿಸಿ ಬಂದು ಕಾರ್ಗಿಲ್ ಕದನಕ್ಕೆ ನಾಂದಿ ಹಾಡಿತು. ದೇಹಕ್ಕಿಂತ ದೇಶ ಮಿಗಿಲೆಂದು ಬಗೆದ ನಮ್ಮ ವೀರ ಸೈನಿಕರು ಸುಮಾರು ಎರಡು ತಿಂಗಳುಗಳ ಕಾಲ ಶತ್ರು ಪಡೆಯ ವಿರುದ್ಧ ಹೋರಾಡಿ ಅವರ ಹಿಮ್ಮೆಟ್ಟಿಸಿ ಜುಲೈ 26 ರಂದು ಕಾರ್ಗಿಲ್ ಶಿಖರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮುಗಿಲೆತ್ತರ ಹಾರಿಸಿ ಜೈ ಹಿಂದ್ ಘೋಷಣೆ ಕೂಗಿದರು. ನಮ್ಮ ಸುಮಾರು 500 ವೀರ ಸೈನಿಕರು ಅಮರರಾದರು. ಪ್ರತೀ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯದಿವಸ ಎಂದು ಆಚರಿಸುವುದರೊಂದಿಗೆ ಅಮರ ವೀರರ ಆತ್ಮಕೆ ಶಾಂತಿಯನ್ನೂ ಕೋರುತ್ತಿದ್ದೇವೆ.... ಜೈ ಹಿಂದ್... ಭಾರತ ಮಾತೆಗೆ ಜಯವಾಗಲಿ.🙏
*🖊️ಸುಪ್ರಿತಾ ಚರಣ್ ಪಾಲಪ್ಪೆ ಕಡಬ.*
إرسال تعليق