ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಆಂಗ್ಲ ವಿಭಾಗ ಮತ್ತು ಲಿಟರರಿ ಕ್ಲಬ್ ಇದರ ಜಂಟಿ ಆಶ್ರಯದಲ್ಲಿ 'ಮಿನರ್ವಾ ಟ್ರಾವೇರ್ಸ್ ಬಿಯಾನ್ಡ್' ವರ್ಚುವಲ್ ಕಾರ್ಯಕ್ರಮವು ಜೂ.20ರಂದು ಜರಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ಲಾಕ್ಡೌನಿಂದಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಮನೆಯಲ್ಲೇ ಆನ್ಲೈನ್ ತರಗತಿಗಳ ಮುಖೇನ ಶಿಕ್ಷಣ ಪಡೆಯುವಂತಾಗಿದೆ. ಈ ಸಂದರ್ಭದಲ್ಲಿ ಇಂತಹ ಆಟದ ಜೊತೆಗಿನ ಪಾಠ ವಿದ್ಯಾರ್ಥಿಗಳಲ್ಲಿನ ಕೌಶಲ್ಯಗಳನ್ನು ಎತ್ತಿ ಹಿಡಿಯುವಂತಾಗಿದೆ.ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ವಿಭಾಗದ ಕಡೆಯಿಂದ ಮೂಡಿಬರಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಪ್ರಸ್ತುತ ಮೂಡಬಿದಿರೆಯ ಮಹಾವೀರ ಕಾಲೇಜಿನ ಉಪನ್ಯಾಸಕಿ ವರ್ಷಿತ ಎಂ.ವಿ , ಬೆಂಗಳೂರಿನ ಐಟಿಎಸ್ ವೈ ಬಿಐಟಿಎಸ್ ವೈ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉದ್ಯೋಗಿ ಸಂಕೇತ್ ಕುಮಾರ್ ಎನ್ ,ನಿಟ್ಟೆಯ ಎನ್.ಎಂ.ಎ. ಎಂ ಇನ್ಸ್ಟಿಟ್ಯೂಟ್ ಟೆಕ್ನಾಲಜಿಯ ಪಿ.ಆರ್.ಓ ಕೃಷ್ಣರಾಜ ಜೋಯಿಸ , ಬೆಂಗಳೂರಿನ ಶ್ರೀವಿದ್ಯಾ ಕೇಂದ್ರದ ಆಂಗ್ಲ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ಟಿ. ಎನ್ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮತ್ತು ಇಂಗ್ಲಿಷ್ ಕಲಿಕೆಯ ಮಹತ್ವದ ಬಗೆಗೆ ಮಾತನಾಡಿದರು.
ಕಾಲೇಜಿನ ಪದವಿ ವಿದ್ಯಾರ್ಥಿಗಳು ಆಯೋಜಿಸಿದ ವಿವಿಧ ಬಗೆಯ ಸ್ಪರ್ಧೆಗಳು ಜರಗಿದವು. ಇವುಗಳಲ್ಲಿ ಐದು ತಾಲೂಕುಗಳ ನೂರಕ್ಕೂ ಅಧಿಕ ಪದವಿ ಪೂರ್ವ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗಳಿಸಿದರು.ಈ ಸಂದರ್ಭದಲ್ಲಿ ಟೀಮ್ ಲೇಡಿ ಮ್ಯಾಕ್ಬೆತ್ ಹಾಗು ಟೀಮ್ ವಿಕ್ಟೊರಿಯ ಸಹಯೋಗದಲ್ಲಿ ಎರಡು ಹಂತಗಳ ಬ್ರೈನ್ ಬ್ರೇಕರ್ ಎಂಬ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ವಾಲ್ಡರ್ ಪ್ರಥಮ ಹಾಗೂ ಶ್ರೀನಿಧಿ ದ್ವಿತೀಯ ಸ್ಥಾನ ಪಡೆದುಕೊಂಡರು. ಇನ್ನು ಟೀಮ್ ವಿಬ್ ಜಿಯೋರ್ ಆಯೋಜಿಸಿದ 'ಟೂನ್ ಫಾರ್ ಥೋಟ್' ಸ್ಪರ್ಧೆಯಲ್ಲಿ ಅರ್ಪಿತಾ ಕುಂದರ್ ಪ್ರಥಮ ಹಾಗೂ ಶಿಲ್ಪ ಕೋಲ್ಕಜೆ ದ್ವಿತೀಯ ಸ್ಥಾನ ಪಡೆದರು. 'ಜಂಬಲ್ ಬಾಂಬಲ್' ಸ್ಪರ್ಧೆಯಲ್ಲಿ ಶ್ರೀನಿಧಿ ಪ್ರಥಮ ಹಾಗೂ ನಂದನ್ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರು.
ಎಲ್ಲಾ ಸ್ಪರ್ಧೆಗಳಲ್ಲೂ ಉತ್ತಮವಾಗಿ ಸ್ಪರ್ದಿಸಿದ ಮೂಡಬಿದಿರೆಯ ಮಹಾವೀರ ಕಾಲೇಜಿನ ಹೆನ್ವಿಲ್ ವಾಲ್ಡರ್ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಕಲ್ಲಡ್ಕ ಶ್ರೀ ರಾಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀನಿಧಿ ದ್ವಿತೀಯ ಪ್ರಶಸ್ತಿ ಪಡೆದುಕೊಂಡರು.
ಈ ಸಂದರ್ಭ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಎಚ್ ವಿಭಾಗದ ಸಾಧನೆ ಹಾಗೂ ಚಟುವಟಿಕೆಗಳ ಕುರಿತಾದ ವರದಿ ಮಂಡಿಸಿದರು.
ಕಾಲೇಜಿನ ತೃತೀಯ ಕಲಾ ಪದವಿ ವಿಭಾಗದ ವಿದ್ಯಾರ್ಥಿನಿ ರಚನಾ ಪ್ರಾರ್ಥಿಸಿದರು. ವಿಭಾಗದ ಉಪನ್ಯಾಸಕಿಯರಾದ ಅಂಬಿಕಾ ಎನ್.ಆರ್ ಸ್ವಾಗತಿಸಿ, ಸರಸ್ವತಿ ಸಿ.ಕೆ ವಂದಿಸಿದರು. ಉಪನ್ಯಾಸಕಿ ರೇಖಾ ನಾಯರ್ ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment