ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆ.2ರಿಂದ 7ರ ವರೆಗೆ: ನಿಟ್ಟೆಯಲ್ಲಿ ಆರು ದಿನಗಳ ಎಸ್.ಟಿ.ಟಿ.ಪಿ ಕಾರ್ಯಕ್ರಮ

ಆ.2ರಿಂದ 7ರ ವರೆಗೆ: ನಿಟ್ಟೆಯಲ್ಲಿ ಆರು ದಿನಗಳ ಎಸ್.ಟಿ.ಟಿ.ಪಿ ಕಾರ್ಯಕ್ರಮ


ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ವಿಭಾಗವು ‘ಎಪ್ಲಿಕೇಶನ್ ಆಫ್ ಮೆಷಿನ್ ಲರ್ನಿಂಗ್ & ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಟೆಕ್ನಿಕ್ಸ್ ಫಾರ್ ಕಂಟ್ರೋಲ್ ಆಫ್ ಫ್ಯೂಚರ್ ಗ್ರಿಡ್’ ಎಂಬ ವಿಷಯದ ಬಗೆಗೆ ಎ.ಐ.ಸಿ.ಟಿ.ಇ ಪ್ರಾಯೋಜಿತ ಶಾರ್ಟ್ ಟರ್ಮ್ ಟ್ರೈನಿಂಗ್ ಪ್ರೋಗ್ರಾಮ್ (ಎಸ್.ಟಿ.ಟಿ.ಪಿ) ಕಾರ್ಯಕ್ರಮವನ್ನು ಆಗಸ್ಟ್ 2 ರಿಂದ 7 ರವರೆಗೆ ಹಮ್ಮಿಕೊಂಡಿದೆ.


ಈ ಕಾರ್ಯಕ್ರಮವನ್ನು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್ ವಿನಯ ಹೆಗ್ಡೆ ಆಗಸ್ಟ್ 2 ರಂದು ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಿರುವರು. ಎನ್.ಐ.ಟಿ.ಕೆ ಸುರತ್ಕಲ್‍ನ ಇಲೆಕ್ಟ್ರಿಕಲ್ ವಿಭಾಗದ ಪ್ರೊಫೆಸರ್ ಡಾ.ದತ್ತಾತ್ರೇಯ ಗಾಂವ್ಕರ್ ದಿಕ್ಸೂಚಿ ಭಾಷಣ ಮಾಡಲಿರುವರು.


‘ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಐಐಎಸ್ಸಿ, ಐಐಟಿ, ಎನ್.ಐ.ಟಿ ಗಳ ಪ್ರೊಫೆಸರ್‍ಗಳು ಮೆಷಿನ್ ಲರ್ನಿಂಗ್ ಮತ್ತು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಟೆಕ್ನಿಕ್ಸ್ ಬಗೆಗೆ ವಿವಿಧ ವಿಚಾರಗಳನ್ನು ಹಂಚಿಕೊಳ್ಳಲಿರುವರು’ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 Comments

Post a Comment

Post a Comment (0)

Previous Post Next Post