ಪುತ್ತೂರು: ಎಸ್.ಎಸ್.ಎಲ್ .ಸಿ ಪರೀಕ್ಷೆ ಸದ್ಯದಲ್ಲೆ ಆರಂಭವಾಗಲಿದ್ದು ಪೂರಕ ಕೆಲಸಗಳು ನಡೆಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ 179 ಪರೀಕ್ಷಾ ಕೇಂದ್ರ ಗಳಲ್ಲಿ 649 ಸ್ವಯಂಸೇವಕರು ಭಾಗವಹಿಸಲಿದ್ದಾರೆ. ರಾಜ್ಯ ಸಂಸ್ಥೆಯಿಂದ 8000 ಮಾಸ್ಕ್ ನೀಡಲಾಗಿದೆ. ಪುತ್ತೂರು ತಾಲೂಕಿನ 25 ಪರೀಕ್ಷಾ ಕೇಂದ್ರಗಳಲ್ಲಿ127 ಸ್ಕೌಟ್ ಎಂಡ್ ಗೈಡ್ ಸ್ವಯಂಸೇವಕರು ಸೇವೆಯನ್ನು ಸಲ್ಲಿಸಲಿದ್ದಾರೆ. ಹಾಗೆಯೇ ಸ್ವಯಂಸೇವಕರಿಗೆ ಕಿಟ್ ವಿತರಿಸಲಾಗುವುದು ಎಂದು ಭಾರತ ಸ್ಕೌಟ್ ಎಂಡ್ ಗೈಡ್ಸ್ ದ.ಕ ಜಿಲ್ಲಾ ಸಂಘಟಕರಾದ ಭರತ್ ರಾಜ್ ಕೆ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಮತ್ತು ರೋವರ್ಸ್ ರೇಂಜರ್ ಘಟಕದ ಸಹಯೋಗದಲ್ಲಿ ನಡೆಸಿದ ಎಸ್. ಎಸ್.ಎಲ್ .ಸಿ ಪರೀಕ್ಷೆಯ ಮಾಹಿತಿ ಕಾರ್ಯಾಗಾರದಲ್ಲಿ ಶುಕ್ರವಾರ ಮಾತನಾಡಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಕೋವಿಡ್ ಸಂಯೋಜಕ ತ್ಯಾಗಂ ಹರೇಕಳ ಮಾತನಾಡಿ ಪರೀಕ್ಷಾ ಕೇಂದ್ರದಲ್ಲಿ ಸ್ವಯಂ ಸೇವಕರ ಕರ್ತವ್ಯದ ಬಗ್ಗೆ ಮಾಹಿತಿ ನೀಡಿದರು. ಸ್ವಯಂ ಸೇವಕರು ಸಮವಸ್ತ್ರವನ್ನು ಧರಿಸಿ,ಮಾಸ್ಕ್ ಧರಿಸಿ, ಸಾಮಾಜಿಕ ಅಂತರದೊಂದಿಗೆ, ಶಿಸ್ತು, ಸಮಯಪ್ರಜ್ಞೆ, ಹಾಗೂ ನಗುಮುಖದೊಂದಿಗೆ ಸಂದರ್ಭಕ್ಕೆ ತಕ್ಕ ಕೆಲಸ ಮಾಡಬೇಕು, ಹಾಗೇ ಸ್ವಯಂ ಸೇವಕರಿಗೆ ಸಣ್ಣ ಮೊತ್ತವನ್ನು ಅಭಿನಂದನಾ ರೂಪದಲ್ಲಿ ಕೊಡುವಂತೆ ಪ್ರಸ್ತಾಪ ಮಾಡಿದರು.
ಜಿಲ್ಲಾ ತರಬೇತಿ ಆಯುಕ್ತರಾದ ಪ್ರತೀಮ್ ರವರು ಮಾತನಾಡಿ ಕಾಲೇಜಿನ ರೋವರ್ಸ್ ರೇಂಜರ್ ಅಭಿವೃದ್ಧಿ ಹೊಂದಿ ಕರ್ನಾಟಕ ರಾಜ್ಯದಾದ್ಯಂತ ಹಬ್ಬಿದೆ. ಇದರ ಬೆಳವಣಿಗೆಗೆ ಸದಸ್ಯರ ಶ್ರಮವೇ ಕಾರಣ ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ರೋವರ್ಸ್ ರೇಂಜರ್ ನಂತ ವಿಭಾಗದಲ್ಲಿ ನಮ್ಮ ಅಭಿವೃದ್ಧಿ ಸಾದ್ಯ. ಇದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಮಗೆ ತೊಂದರೆ ಆಗದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯಾದ ವಿದ್ಯಾಗೌರಿ ಮಾತನಾಡಿ, ಸೇವೆ ಎಲ್ಲರಿಗೂ ಅವಶ್ಯ. ಸೇವೆ ಮಾಡಿದರೆ ಮಾತ್ರ ಜೀವನ ನಡೆಸಲು ಸಾಧ್ಯ. ಸ್ಕೌಟ್ಸ್ ಗೈಡ್ ಸದಸ್ಯರಿಗೆ ಸೇವೆಯೇ ಜೀವನ. ಸಿಕ್ಕಿರುವ ಅವಕಾಶ ಬಳಸಿಕೊಂಡು ಸೇವಾ ಮನೋಭಾವ ಹೃದಯದಲ್ಲಿ ಸ್ಥಿರವಾಗಿರಲಿ ಎಂದು ನುಡಿದರು.
ಪುತ್ತೂರು ತಾಲೂಕು ದೈ.ಶಿ ಪರಿವೀಕ್ಷಣಾ ಅಧಿಕಾರಿಯವರಿಗೆ 6000 ಮಾಸ್ಕ್ ಹಸ್ತಾಂತರಿಸಲಾಯಿತು. ಹಾಗೂ ಇತ್ತೀಚಿಗಷ್ಟೇ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದ ವಿವೇಕಾನಂದ ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಡಾ.ಈಶ್ವರ ಪ್ರಸಾದ್, ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸರಕಾರಿ ಪದವಿ ಕಾಲೇಜು ಬೆಟ್ಟಂಪಾಡಿ ಯ ರೋವರ್ ಸ್ಕೌಟ್ ಲೀಡರ್ ಡಾ. ಪೊಡಿಯ ಇವರನ್ನು ಸನ್ಮಾನಿಸಲಾಯಿತು. ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿದ ಶಿಕ್ಷಕರಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಮತ್ತು ನೋಡಲ್ ಅಧಿಕಾರಿಯಾದ ಸುಂದರ್ ಗೌಡ ಮತ್ತು ಉಪ್ಪಿನಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಂದನಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರೋವರ್ಸ್ ಲೀಡರ್ ಡಾ. ಈಶ್ವರ ಪ್ರಸಾದ್ ಸ್ವಾಗತಿಸಿ, ರೋವರ್ಸ್ ಲೀಡರ್ ಪುನೀತ್ ವಂದಿಸಿದರು. ರೇಂಜರ್ ವಿದ್ಯಾರ್ಥಿನಿ ಶಿಲ್ಪಾ ಕಾರ್ಯಕ್ರಮವನ್ನು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment